Saturday, February 8, 2025
Homeರಾಷ್ಟ್ರೀಯ | Nationalದೆಹಲಿ ಗದ್ದುಗೆ ಗೆದ್ದ ಬಿಜೆಪಿ, ಸಿಎಂ ಗದ್ದುಗೆ ಲಾಬಿ ಶುರು

ದೆಹಲಿ ಗದ್ದುಗೆ ಗೆದ್ದ ಬಿಜೆಪಿ, ಸಿಎಂ ಗದ್ದುಗೆ ಲಾಬಿ ಶುರು

Who will be Delhi CM if BJP returns to power after 27 years

ನವದೆಹಲಿ,ಫೆ.8- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಕೇಂದ್ರದಲ್ಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲೂ ಬಿಜೆಪಿ ಅಧಿಕಾರದಲ್ಲಿ ಇದ್ದಂತಾಗುತ್ತದೆ. ಹಾಗಾದರೆ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿಯಿಂದ ಯಾರು ಸಿಎಂ ಆಗಲಿದ್ದಾರೆ? ಸಿಎಂ ರೇಸ್‌‍ನಲ್ಲಿ ಮುಂಚೂಣಿಯಲ್ಲಿರುವವರು ಯಾರು? ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮಾ ದೆಹಲಿ ಸಿಎಂ ರೇಸ್‌‍ನಲ್ಲಿ ಪ್ರಮುಖರು. ಇವರು ಬಿಜೆಪಿಯ ಪ್ರಮುಖ ನಾಯಕ ಮತ್ತು ಪ್ರಭಾವಿ ಆಗಿದ್ದಾರೆ. ಇವರಿಗೆ ದೆಹಲಿಯಲ್ಲಿ ಸಿಎಂ ಆಗುವ ಅವಕಾಶ ಸಿಗುವ ಸಾಧ್ಯತೆ ಇದೆ. ಮನೋಜ್‌ ತಿವಾರಿಯವರು ಸತತ ಮೂರನೇ ಬಾರಿಗೆ ಈಶಾನ್ಯ ದೆಹಲಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಜಯ ಗಳಿಸಿದರೆ ಇವರು ಸಿಎಂ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.

ನವದೆಹಲಿಯ ಸಂಸದೆ ಮತ್ತು ದಿವಂಗತ ಸುಷಾ ಸ್ವರಾಜ್‌ ಅವರ ಪುತ್ರಿ ಬನ್ಸುರಿ ಸ್ವರಾಜ್‌ ಅವರು ದೆಹಲಿ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.ಹಿರಿಯ ಬಿಜೆಪಿ ನಾಯಕಿ ಮತ್ತು ಪ್ರಭಾವಿ ಭಾಷಣಕಾರರಾದ ಮೀನಾಕ್ಷಿ ಲೇಖಿ ಈ ರೇಸ್‌‍ನಲ್ಲಿ ಇದ್ದು ಬಿಜೆಪಿ ಮಹಿಳೆಯರನ್ನು ಸಿಎಂ ಮಾಡುವ ಸಾಧ್ಯತೆ ಇದೆ.

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ತೆರೆಮರೆಯಲ್ಲಿ ಸಿಎಂ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಈಗಾಗಲೇ ಆಸಕ್ತ ಅಭ್ಯರ್ಥಿಗಳು ಸಿಎಂ ಸ್ಥಾನ ತಮ ತೆಕ್ಕೆಗೆ ಪಡೆಯಲು ತಯಾರಿ ಶುರು ಮಾಡಿದ್ದಾರೆ

ವಿಧಾನಸಭೆಯಲ್ಲಿ ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ವಿಜೇಂದರ್‌ ಗುಪ್ತಾ ಅವರು ಸಹ ಪ್ರಬಲ ಸ್ಪರ್ಧಿಯಾಗಬಹುದು ಎಂದು ಗೌತಮ್‌ ಹೇಳಿದ್ದಾರೆ.
ಈ ಬಾರಿ ಬಿಜೆಪಿ ಕರೋಲ್‌ ಬಾಗ್‌ ಮೀಸಲು ವಿಧಾನಸಭಾ ಕ್ಷೇತ್ರದಿಂದ ದುಷ್ಯಂತ್‌ ಗೌತಮ್‌ ಅವರಿಗೆ ಟಿಕೆಟ್‌ ನೀಡಿದೆ. ಅವರು ದೆಹಲಿಯ ಮಲ್ಕಾ ಗಂಜ್‌ನಲ್ಲಿ ಹುಟ್ಟಿ ಬೆಳೆದಿದ್ದಾರೆ. ದುಶ್ಯಂತ್‌ ಗೌತಮ್‌ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದು, ಸಂಘಟನೆಯಲ್ಲಿ ವಿವಿಧ ಹ್ದುೆಗಳನ್ನು ಅಲಂಕರಿಸಿದ್ದಾರೆ.

ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ದುಷ್ಯಂತ್‌ ಗೌತಮ್‌ ಅವರು ತಮ ಓದು ಮುಗಿಸಿದ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಭಾಗೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಮೂರು ಬಾರಿ ಬಿಜೆಪಿ ಪರಿಶಿಷ್ಟ ಮೋರ್ಚಾದ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಅವರು ಸಂಘಟನೆ ಮತ್ತು ರಾಜಕೀಯವನ್ನು ಹತ್ತಿರದಿಂದ ನೋಡಿದ್ದಾರೆ. ಇವರು ಕೂಡಾ ದೆಹಲಿಯ ಮುಖ್ಯಮಂತ್ರಿ ಹ್ದುೆಗೆ ಪ್ರಬಲ ಸ್ಪರ್ಧಿಯಾಗಬಹುದು ಎಂದು ಮಿಶ್ರಾ ಹೇಳಿದ್ದಾರೆ.

ಇದೇ ವೇಳೆ ಸುಮಾರು 15 ಸ್ಥಾನಗಳು ವಿಐಪಿ ಕ್ಯಾಂಡಿಡೇಟ್‌‍ ಗಳಿಂದಾಗಿ ಚರ್ಚೆಗೆ ಗ್ರಾಸವಾಗಿವೆ. ಕೆಲವು ಹೈ-ಪೊಫೈಲ್‌ ಸ್ಥಾನಗಳಲ್ಲಿ ನವದೆಹಲಿ ಸ್ಥಾನ, ಕಲ್ಕಾಜಿ ಸ್ಥಾನ, ಜಂಗ್ಪುರ ಸ್ಥಾನ, ಪಟಪರ್ಗಂಜ್‌ ಸ್ಥಾನ ಮತ್ತು ಚಾಂದಿನಿ ಚೌಕ್‌ ವಿಧಾನಸಭಾ ಕ್ಷೇತ್ರಗಳು ಸೇರಿವೆ.

RELATED ARTICLES

Latest News