ಬೆಂಗಳೂರ,ಫೆ.8- ದೇಶದ ಜನತೆ ಗ್ಯಾರಂಟಿಗಳನ್ನು ಒಪ್ಪುವುದಿಲ್ಲ ಎಂಬುದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕರ್ನಾಟಕದಲ್ಲೂ ಇದು ತಾತ್ಕಾಲಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಭರಪೂರ ಆಶ್ವಾಸನೆಗಳನ್ನು ಘೋಷಣೆ ಮಾಡಿದರೂ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಎಲ್ಲಾ ಕಾಲದಲ್ಲೂ ನಡೆಯುವುದಿಲ್ಲ ಎಂಬುದು ಫಲಿತಾಂಶದಿಂದ ಆತಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.
27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದೆ. ದೆಹಲಿ ಬಿಜೆಪಿ ಕಾರ್ಯಕರ್ತರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡಿ ಕೇಜ್ರಿವಾಲ್ ಅಧಿಕಾರಕ್ಕೆ ಬಂದಿದ್ದರು. ಕೇಜ್ರಿವಾಲ್ ಬಣ್ಣ ಇದೀಗ ಬಯಲಾಗಿದೆ. ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್,ಸಚಿವರು ಭಾಗಿಯಾಗಿದ್ದರು. ಆಮ್ ಆದಿ ಪಾರ್ಟಿಯನ್ನ ಜನರು ತಿರಸ್ಕಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ತಾತಾಲ್ಕಿಕ ಅಷ್ಟೇ. ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲ. ಶ್ಯೂನ ಸಂಪದಾನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಆರಂಭದಲ್ಲಿ ಕೇಜ್ರಿವಾಲ್ ಬಂದಾಗ ಮಫ್ಲರ್, ಟೋಪಿ,ವ್ಯಾಗನಾರ್ ಕಾರ್ ಇತ್ತು. ಈಗ ಶೇಷಮಹಲ್ ಬೇಂಜ್ ಕಾರ್ ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದು ಟೀಕಿಸಿದರು. ಕ್ರೇಜಿವಾಲ್ ಮೊದಲು ಸಾಮಾನ್ಯವಾಗಿ ಬಂದವರು. ಆಮೇಲೆ ಶೀಷ್ ಮಾಲ್ ಕಟ್ಟಿದ್ದರು. 40 ರೂಂ, 40 ಲಕ್ಷದ ಟಿವಿ ಇಟ್ಟಿಕೊಂಡಿದ್ದರು. ಇದು ಕೂಡ ದೆಹಲಿ ಜನತೆ ಗಮನಿಸಿದ್ದಾರೆ.
ಇಂಡಿ ಮೈತ್ರಿ ಒಕ್ಕೂಟ ಇವರನ್ನು ಟೀಕೆ ಮಾಡುತ್ತಿದ್ದಾರೆ. ಕ್ರೇಜ್ರಿವಾಲ್ ಒಬ್ಬ ಭ್ರಷ್ಟ ಅಂದಿದ್ದರು. ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸಂದೇಶ ಬಂದಿದೆ. ದೆಹಲಿ ಚುನಾವಣಾ ಫಲಿತಾಂಶ ಕರ್ನಾಟಕದ, ತೆಲಂಗಾಣ ಚುನಾವಣಾಗೆ ಇದು ದಾರಿ ದೀಪವಾಗಿದೆ. ಸಂಸತ್ ಚುನಾವಣೆ ಬಳಿಕ ಮಹಾರಾಷ್ಟ್ರ ,ಇದಿಗ ದೆಹಲಿಯಲ್ಲಿ ಗೆದ್ದಿದ್ದೇವೆ. ಇಡೀ ದೇಶಕ್ಕೆ ಒಂದು ಸಂದೇಶ ದೆಹಲಿ ಜನರು ಕೊಟ್ಟಿದ್ದಾರೆ ಎಂದರು.
ದೆಹಲಿ ಜನ ನಿತ್ಯಕುಡಿಯುವ ನೀರನ್ನು ಗಂಗಾ ಮಾತೆಯಂತೆ ಕಾಣುತ್ತಿದ್ದರು. ಆದರೆ ಅರವಿಂದ್ ಕ್ರೇಜಿವಾಲ್ ಪವಿತ್ರಾ ಯಮುನ ನದಿ ಮೇಲೆ ಕಳಂಕ ಹೇರಿದರು. ಜೈಲಿಗೆ ಯಾರೇ ಸಿಎಂ ಹೋದರೂ ರಾಜೀನಾಮೆ ಕೊಡಬೇಕು. ಆದರೆ ರಾಜೀನಾಮೆ ಕೊಡದೇ ಒಂದೂವರೆ ತಿಂಗಳು ಜೈಲಲೇ ಇದ್ದರು. ಆಡಳಿತ ನೆನೆಗುದಿಗೆ ಬಿದ್ದಿತ್ತು ಎಂದರು.
ಮಳ್ಳಿಯಂತೆ ಬಂದು ಕಳ್ಳನಂತೆ ಹೋಗುತ್ತಿದ್ದಾನೆ ಎಂದು ಕಾಂಗ್ರೆಸ್ ನವರೇ ಹೇಳಿದ್ದರು. ಕಾಂಗ್ರೆಸ್ನವರ ವಂಶಪಾರಂಪರ್ಯ ಇತಿಹಾಸವನ್ನು ಹಲವರು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರು ದೇಶಕ್ಕಾಗಿ ಮಾಡುತ್ತಿದ್ದಾರೆ. ಕಾಂಗ್ರೆಸ್ ತಮ ಕುಟುಂಬಕ್ಕಾಗಿ ಮಾಡುತ್ತಿದೆ ಎಂದು ಜನರಿಗೆ ಗೊತ್ತಾಗಿದೆ ಎಂದು ಹೇಳಿದರು.
ಸೋನಿಯಾ ಗಾಂಧಿ,ರಾಹುಲ್ ಗಾಂಧಿ,ಪ್ರಿಯಾಂಕ ಗಾಂಧಿ ಮೂವರು ಈಗ ಬಂದಿದ್ದಾರೆ. ಇದು ಕಾಂಗ್ರೆಸ್ ಕುಟುಂಬ ರಾಜಕಾರಣ. ಮುಂದೆಯೂ ಕಾಂಗ್ರೆಸ್ ಶ್ಯೂನ ಸಂಪದಾನೆಯಾಗಲಿದೆ ಎಂದು ಭವಿಷ್ಯ ನುಡಿದರು.
27 ವರ್ಷದ ಬಳಿಕ ರಾಷ್ಟ್ರದ ರಾಜಧಾನಿಯಲ್ಲಿ ಬಿಜೆಪಿ ಗೆದ್ದಿದೆ. ಕುಂಭಮೇಳ ಆದ ಬಳಿಕ ಈ ಗೆಲುವು ಸಿಕ್ಕಿದೆ. ನರೇಂದ್ರ ಮೋದಿಯವರ ವರ್ಚಸ್ಸು ಇನ್ನು ಹೆಚ್ಚಿದೆ. 12 ಲಕ್ಷ ಆದಾಯ ತೆರಿಗೆ ವಿನಾಯತಿ ಕೂಡ ನಮಗೆ ಲಾಭ ಆಗಿದೆ ಅವರು ಹೇಳಿದರು.