ನವದೆಹಲಿ,ಫೆ.8– ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನಹರಿಸಿದ್ದರು. ಅಲ್ಲದೆ ಹಣದ ಬಲ ಹೊಂದಿದ್ದರು. ಇಂದು ಮತದಾದರು ಪಾಠ ಕಲಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಜ್ರಿವಾಲ್ ನನ್ನ ತತ್ವ ಮತ್ತು ಸಿದ್ಧಾಂತವನ್ನು ತಲೆ ಕೆಳಗೆ ಮಾಡಿದರು. ವ್ಯಕ್ತಿಯ ಆಲೋಚನೆ ಮತ್ತು ನಡವಳಿಕೆ ಶುದ್ಧವಾಗಿರಬೇಕು. ತ್ಯಾಗದ ಗುಣವಿರಬೇಕು ಎಂದು ಪರೋಕ್ಷವಾಗಿ ಆಪ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಭ್ಯರ್ಥಿಯಲ್ಲಿ ಒಳ್ಳೆಯ ನಡವಳಿಕೆ, ಯೋಚನೆ, ಆಪಾದನೆ ರಹಿತ ಜೀವನ ಹಾಗೂ ತ್ಯಾಗ ಮನೋಭಾವವಿದ್ದರೆ ಮತದಾರರರು ಅಂಥವರ ಮೇಲೆ ನಂಬಿಕೆ ಇಡುತ್ತಾರೆ ಎಂದರು. ಈ ವಿಚಾರವನ್ನು ಕೇಜ್ರಿವಾಲ್ ಬಳಿಯೂ ಹೇಳಿದ್ದೆ. ಆದರೆ ಅವರು ಇದರ ಬಗ್ಗೆ ಗಮನಕೊಡಲಿಲ್ಲ. ಬದಲಾಗಿ ಅವರಲ್ಲಿ ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು. ಇದರಿಂದಲೇ ಅವರು ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ ಎಂದು ದೂರಿದರು.
ರಾಜಕೀಯದಲ್ಲಿ ಆಪಾದನೆಗಳು ಬರುತ್ತದೆ. ಅದು ಸುಳ್ಳು ಎಂದು ನಾವು ಸಾಬೀತು ಮಾಡಬೇಕು. ಆದರೆ ಅವರು ಆ ವಿಚಾರದ ಕಡೆಗೆ ತಲೆಹಾಕಲೇ ಇಲ್ಲ. ಸತ್ಯ ಯಾವತ್ತಿದ್ದರೂ ಸತ್ಯವಾಗಿರುತ್ತದೆ. ಆದ್ದರಿಂದ ನಾನು ಆ ಪಕ್ಷದಿಂದ ದೂರವಿರಬೇಕು ಎಂದು ನಿರ್ಧರಿಸಿದೆ. ಅವತ್ತಿನಿಂದ ಆಪ್ನಿಂದ ನಾನು ದೂರ ಇದ್ದೇನೆ ಎಂದು ಹೇಳಿದರು.
ಇಂಡಿ ಒಕ್ಕೂಟದ ಮಿತ್ರಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಮತ್ತು ಜಮುಕಾಶೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದು, ಸಂತರೊಬ್ಬರ ಮೀಮ್ ಶೇರ್ ಮಾಡಿರುವ ಒಮರ್ ಅಬ್ದುಲ್ಲಾ ಔರ್ ಲಡೋ ಆಪಾಸ್ ಮೇ (ಇನ್ನು ಒಳ ಜಗಳ ಮಾಡಿಕೊಳ್ಳಿ) ಎಂಬ ಶೀರ್ಷಿಕೆಯನ್ನು ಹಂಚಿಕೊಂಡಿದ್ದು, ಈ ಮೂಲಕ ಇಂಡಿಯಾ ಒಕ್ಕೂಟದಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದ ಮತ್ತೊಬ್ಬರಿಗೆ ಲಾಭವಾಗುತ್ತಿದೆ ಎಂದು ಹೇಳಿದ್ದಾರೆ.