Tuesday, January 27, 2026
Homeಬೆಂಗಳೂರುಸಾರ್ವಜನಿಕರ ಸಮಯಪ್ರಜ್ಞೆಯಿಂದ ಅಪಹರಣಕಾರರಿಂದ ಯುವಕ ಬಚಾವ್‌

ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅಪಹರಣಕಾರರಿಂದ ಯುವಕ ಬಚಾವ್‌

Youth saved from kidnappers due to public

ಬೆಂಗಳೂರು,ಜ.27-ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಯುವಕನನ್ನು ಅಪಹರಿಸಲು ಯತ್ನಿಸಿದ್ದು ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಬೆಂಗಳೂರು ಹೊರವಲಯದ ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್‌‍ ಬಳಿ ನಿನ್ನೆ ಸಂಜೆ ಯುವಕರ ಗುಂಪೊಂದು ಎಳನೀರು ಕುಡಿಯುತ್ತ ನಿಂತಿತ್ತು.

ಆ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಜೊತೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಆತನನ್ನು ಕಾರಿನಲ್ಲಿ ಅಪಹರಿಸಲು ಬಲವಂತವಾಗಿ ಎಳೆದಾಡುತ್ತಿದ್ದಾಗ ಆತ ತಪ್ಪಾಯಿತು ಎಂದು ಹೇಳಿದರೂ ಬಿಟ್ಟಿಲ್ಲ.

ಆ ಯುವಕ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಳ್ಳುತ್ತಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದವರು ಸಹಾಯಕ್ಕಾಗಿ ಇವರ ಬಳಿಬರುತ್ತಿದ್ದಂತೆ ಪುಂಡರ ಗುಂಪು ಯುವಕನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ.

ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಒಟ್ಟಾರೆ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಹಾಗೂ ಮಾನವೀಯತೆ ಮೆರೆದಿದ್ದರಿಂದ ಪುಂಡರ ಕೈಗೆ ಸಿಗದೇ ಯುವಕ ಬಚಾವ್‌ಆಗಿದ್ದಾನೆ.

RELATED ARTICLES

Latest News