Wednesday, February 26, 2025
Homeರಾಜಕೀಯ | Politicsಕರ್ನಾಟಕ ಬಿಜೆಪಿ ಕಚ್ಚಾಟದತ್ತ ಗಮನಹರಿಸುತ್ತಾ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ಹೈಕಮಾಂಡ್ ..?

ಕರ್ನಾಟಕ ಬಿಜೆಪಿ ಕಚ್ಚಾಟದತ್ತ ಗಮನಹರಿಸುತ್ತಾ ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ಹೈಕಮಾಂಡ್ ..?

is BJP high command focus on karnataka BJP

ಬೆಂಗಳೂರು,ಫೆ.9- ಪ್ರತಿಷ್ಠಿತ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಗೆಲುವಿನ ರಣಕೇಕೆ ಹಾಕುತ್ತಿರುವ ಬಿಜೆಪಿ ಕರ್ನಾಟಕದ ಭಿನ್ನಮತ ಶಮನದತ್ತ ಗಮನಹರಿಸುತ್ತದೆಯೇ ಎಂಬ ಯಕ್ಷಪ್ರಶ್ನೆ ಎದುರಾಗಿದೆ.

ಹರಿಯಾಣ, ಮಹಾರಾಷ್ಟ್ರ ಚುನಾವಣೆ ಮುಕ್ತಾಯವಾಗಲಿ, ಕರ್ನಾಟಕ ಬಿಜೆಪಿ ಕಿತ್ತಾಟಕ್ಕೆ ಹೈಕಮಾಂಡ್ ಅಂತ್ಯ ಹಾಡಲಿದೆ ಎಂದೇ ರಾಜ್ಯ ಬಿಜೆಪಿಯಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಆದರೆ ಮೂರು ಚುನಾವಣೆಯಲ್ಲಿ ಎರಡರಲ್ಲಿ ಗೆಲುವು ಸಾಧಿಸಿದರೂ ಹೈಕಮಾಂಡ್ ಮಾತ್ರ ರಾಜ್ಯ ಬಿಜೆಪಿ ಭಿನ್ನಮತಕ್ಕೆ ಬ್ರೇಕ್ ಹಾಕಿಲ್ಲ.

ಇದೀಗ ದೆಹಲಿ ಚುನಾವಣೆ ಮುಕ್ತಾಯಗೊಂಡಿದೆ. ಬಿಜೆಪಿ 48 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಲಿದೆ. ಯಾರನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂಬುವುದಷ್ಟೆ ಇನ್ನು ನಿರ್ಧಾರ ಆಗಬೇಕಾಗಿದೆ.

ದೆಹಲಿ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದರು. ಯತ್ನಾಳ್ ಹಾಗೂ ಟೀಂ ದೆಹಲಿಯಲ್ಲಿ ಬೀಡು ಬಿಟ್ಟಿತ್ತು. ಆದರೆ ಚುನಾವಣೆ ತಂತ್ರಗಾರಿಕೆಯಲ್ಲಿ ಬ್ಯುಸಿಯಾಗಿದ್ದ ಬಿಜೆಪಿ ನಾಯಕರು ಯತ್ನಾಳ್ ಹಾಗೂ ಟೀಂಗೆ ದರ್ಶನ ನೀಡಿಲ್ಲ. ಹೀಗಾಗಿ ಹೋದವರು ಬರಿಗೈಯಲ್ಲಿ ವಾಪಸ್ ಬರಬೇಕಾಯಿತು.

ಸದ್ಯ ದೆಹಲಿ ಚುನಾವಣೆ ಮುಗಿದಿದೆ. ರಾಜ್ಯದಲ್ಲಿ ಬಿಜೆಪಿ ತಿಕ್ಕಾಟ ತೀವ್ರಗೊಂಡಿದೆ. ಬಣ ಬಡಿದಾಟಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಬಿಜೆಪಿ ನಾಯಕತ್ವ ಏನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಎಲ್ಲರನ್ನು ಕೆರಳಿಸಿದೆ. ಇದುವರೆಗೂ ಚುನಾವಣೆಗಳ ನೆಪ ಕೊಡಿತ್ತಿದ್ದ ಬಿಜೆಪಿ ರಾಷ್ಟ್ರೀಯ ನಾಯಕರು, ಇದೀಗವಾಗದರೂ ರಾಜ್ಯಕ್ಕೆ ಆಗಮಿಸಿ ಭಿನ್ನಮತಕ್ಕೆ ಬ್ರೇಕ್ ಹಾಕಲಿದ್ದಾರಾ? ಎಂಬ ಕುತೂಹಲವೂ ಕೆರಳಿಸಿದೆ.

ಬಿಜೆಪಿಯಲ್ಲಿ ಯತ್ನಾಳ್ ಟೀಂ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಒಪ್ಪುವುದಿಲ್ಲ ಎಂದು ಘಂಟಾಘೋಷವಾಗಿ ಘೋಷಿಸಿದೆ. ಹೀಗಿರುವಾಗ ಪರ್ಯಾಯ ಏನು ಎಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಸದ್ಯ ರಾಜ್ಯದಲ್ಲಿ ಬಿಜೆಪಿ ಭಿನ್ನಮತಕ್ಕೆ ತಕ್ಕಮಟ್ಟಿನ ಪರಿಹಾರವನ್ನು ನೀಡುವುದು ವರಿಷ್ಠರ ಮುಂದೆ ಇರುವ ಬಹುದೊಡ್ಡ ಸವಾಲು, ಈ ಸವಾಲನ್ನು ಯಾವ ರೀತಿಯಲ್ಲಿ ವರಿಷ್ಠ ನಾಯಕರು ನಿಭಾಯಿಸುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ನಡುವೆ ಬಿಹಾರ ಚುನಾವಣೆಯೂ ಇನ್ನೇನು ಘೋಷಣೆ ಆಗಲಿದೆ. ದೆಹಲಿ ಚುನಾವಣೆಯ ಬಳಿಕ ಬಿಹಾರ ಚುನಾವಣೆಯತ್ತ ಬಿಜೆಪಿ ಗಮನ ಹರಿಸಬೇಕಾಗಿದೆ. ರಾಜ್ಯ ಬಿಜೆಪಿ ಭಿನ್ನಮತ ಬಗೆಹರಿಸುವ ವಿಚಾರ ಬಂದಾಗ ಮತ್ತೆ ಬಿಹಾರದತ್ತ ಬಿಜೆಪಿ ವರಿಷ್ಠರು ಬೊಟ್ಟು ಮಾಡ್ತಾರಾ? ಎಂಬುವುದು ಕುತೂಹಲ.

RELATED ARTICLES

Latest News