Wednesday, March 12, 2025
Homeರಾಷ್ಟ್ರೀಯ | Nationalಟಿಟಿಗೆ ಟ್ರಕ್‌ ಡಿಕ್ಕಿ, ಮಹಾಕುಂಭದಿಂದ ಹಿಂತಿರುಗುತ್ತಿದ್ದ 7 ಮಂದಿ ಸಾವು

ಟಿಟಿಗೆ ಟ್ರಕ್‌ ಡಿಕ್ಕಿ, ಮಹಾಕುಂಭದಿಂದ ಹಿಂತಿರುಗುತ್ತಿದ್ದ 7 ಮಂದಿ ಸಾವು

7 pilgrims, returning from Maha Kumbh, killed in bus-truck collision near MP's Jabalpur

ಜಬಲ್‌ಪುರ, ಫೆ.11- ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಟ್ರಕ್‌ಗೆ ಟೆಂಪೋ ಟ್ರಾವೆಲರ್‌ ಡಿಕ್ಕಿ ಹೊಡೆದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭದಿಂದ ಹಿಂದಿರುಗುತ್ತಿದ್ದ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಸಿಹೋರಾದ ಎನ್‌ಎಚ್‌-30 ರ ಮೊಹ್ಲಾ ಬರ್ಗಿ ಬಳಿ ಅಪಘಾತ ಸಂಭವಿಸಿದೆ ಮತ್ತು ಮತರು ಆಂಧ್ರಪ್ರದೇಶಕ್ಕೆ ಸೇರಿದವರು. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಮೃತಪಟ್ಟವರು ಗಂಗಾ, ಯಮುನಾ ಮತ್ತು ಅತೀಂದ್ರಿಯ ಸರಸ್ವತಿ ನದಿಗಳ ಸಂಗಮವಾದ ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಭಕ್ತರು ಹಿಂತಿರುಗುತ್ತಿದ್ದರು. ಅಪಘಾತದ ನಂತರ ಜಬಲ್‌ಪುರದ ಕಲೆಕ್ಟರ್‌ ಮತ್ತು ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿನ್ನೆ ಆಗ್ರಾದ ದಂಪತಿಗಳು ಮಹಾಕುಂಭದಿಂದ ಹಿಂದಿರುಗುತ್ತಿದ್ದಾಗ ಅವರ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಅದೇ ರೀತಿ ಒಡಿಶಾದ ರೂರ್ಕೆಲಾ ಮೂಲದ ವ್ಯಕ್ತಿಯೊಬ್ಬರು ನಿನ್ನೆ ಉತ್ತರ ಪ್ರದೇಶದ ಸೋನ್‌ಭದ್ರಾದಲ್ಲಿ ಮಹಾಕುಂಭದಿಂದ ಅವರ ಮನೆಗೆ ತೆರಳುತ್ತಿದ್ದ ಕಾರು ಬಸ್‌‍ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಇನ್ನು ಕೆಲ ಪ್ರದೇಶಗಳಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಮಹಾಕುಂಭದಿಂದ ವಾಪಸ್ಸಾಗುತ್ತಿದ್ದ ಹಲವರು ಮಂದಿ ಮೃತಪಟ್ಟಿರುವ ಬಗ್ಗ ವರದಿಗಳಾಗಿವೆ.

RELATED ARTICLES

Latest News