ದಾಮೋಹ್, ಫೆ 11– ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಚಾಲಕ, ಕಂಡಕ್ಟರ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದರೆಂದು 9 ನೇ ತರಗತಿಯ ಇಬ್ಬರು ಹುಡುಗಿಯರು ಚಲಿಸುತ್ತಿದ್ದ ಬಸ್‌ನಿಂದ ಜಿಗಿದ ಘಟನೆ ಇಲ್ಲಿ ನಡೆದಿದೆ.
ಈ ಘಟನೆಯಲ್ಲಿ ಬಾಲಕಿಯರು ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಬಸ್ ಚಾಲಕ, ಕಂಡಕ್ಟರ್ ಹಾಗೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ಇಬ್ಬರು ಶಾಲಾ ವಿದ್ಯಾರ್ಥಿನೀಯರು ಪರೀಕ್ಷೆಗೆ ಹಾಜರಾಗಲು ಅಧ್ರೋತದಿಂದ ಬಸ್‌ನಲ್ಲಿ ಹೋಗುತ್ತಿದ್ದರು. ಬಸ್‌ನಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ಇದ್ದರು.
ಆರೋಪಿಗಳು ಬಾಲಕೀಯರ ಬಳಿ ಅಶ್ಲೀಲವಾಗಿ ಮಾತನಾಡಿದ್ದಾರೆ ಆಗ ಆತಂಕಗೊಂಡು ಬಸ್ ನಿಲ್ಲಿಸಲು ಹೇಳಿದರೆ ಚಾಲಕ ನಿರಾಕರಿಸಿದ್ದ ಎಂದು ಪೊಲೀಸ್ ಉಪಾಧೀಕ್ಷಕ ಭಾವನಾ ಡಾಂಗಿ ತಿಳಿಸಿದ್ದಾರೆ.
ಆರೋಪಿಗಳು ವಾಹನದ ಹಿಂದಿನ ಬಾಗಿಲನ್ನು ಸಹ ಮುಚ್ಚಿದ್ದರಿಂದ ಹುಡುಗಿಯರಿಗೆ ಆತಂಕಗೊಂಡು .ತಮ ಸುರಕ್ಷತೆಗಾಗಿ ಹೆದರಿ ಇಬ್ಬರು ಹುಡುಗಿಯರು ಚಲಿಸುವ ಬಸ್‌ನಿಂದ ಜಿಗಿದಿದ್ದಾರೆ ಎಂದು ಡಾಂಗಿ ಹೇಳಿದರು.
ಬಂಧಿತರನ್ನು ಚಾಲಕ ಮೊಹವದ್ ಆಶಿಕ್, ಕಂಡಕ್ಟರ್ ಬನ್ಶಿಲಾಲ್ ಮತ್ತು ಇತರ ಇಬ್ಬರನ್ನು ಹುಕುಮ್ ಸಿಂಗ್ ಮತ್ತು ಮಾಧವ್ ಅಸತಿ ಎಂದು ಗುರುತಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮಿಶ್ರಾ ತಿಳಿಸಿದ್ದಾರೆ