ಹಾವೇರಿ,ಫೆ.11- ಜಾತ್ರೆಗೆಂದು ಬೈಕ್ನಲ್ಲಿ ಹೋಗುತ್ತಿದ್ದ ಮೂವರು ಯುವಕರು ಮುಂದೆ ಹೋಗುತ್ತಿದ್ದ ಎತ್ತಿನ ಗಾಡಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರವ ಘಟನೆ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ಕಳೆದ ರಾತ್ರಿ ನಡೆದಿದೆ.
ಮೃತರನ್ನು ಶಶಿಕುಮಾರ್ ಉಪ್ಪಾರ (25), ಆಕಾಶ್ ಬಿರಾದಾರ (23) ಮತ್ತು ದರ್ಶನ್ (23) ಎಂದು ಗುರುತಿಸಲಾಗಿದೆ. ಮೂವರು ಕಳೆದ ರಾತ್ರಿ ಹನುಮನಮಟ್ಟಿಯಿಂದ ಮೈಲಾರ ಜಾತ್ರೆಗೆ ಬೈಕ್ನಲ್ಲಿ ಹೊರಟಿದಾಗ ಕತ್ತಲಲ್ಲಿ ಎತ್ತಿನ ಗಾಡಿ ಕಾಣದೆ ಡಿಕ್ಕಿ ಹೊಡೆದಿದ್ದಾರೆ ರಸ್ತೆಗೆ ಉರುಳಿಬಿದ್ದಾಗ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹಾವೇರಿಯಲ್ಲಿ ದರ್ಶನ್ ಹಾಗೂ ಆಕಾಶ್ ಮೂರನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಶಶಿಕುಮಾರ್ ಹನುಮನಮಟ್ಟಿ ಹೋಟೆಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.