Wednesday, March 12, 2025
Homeರಾಷ್ಟ್ರೀಯ | Nationalಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಮಹಂತ್‌ ಸತ್ಯೇಂದ್ರ ದಾಸ್‌‍ ನಿಧನ

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಮಹಂತ್‌ ಸತ್ಯೇಂದ್ರ ದಾಸ್‌‍ ನಿಧನ

Ayodhya Ram Mandir chief priest Acharya Mahant Satyendra Das passes away

ಲಕ್ನೋ, ಫೆ.12- ಅಯೋಧ್ಯೆಯ ರಾಮಜನಭೂಮಿ ದೇವಸ್ಥಾನದ ಮುಖ್ಯ ಅರ್ಚಕ ಮಹಂತ್‌ ಸತ್ಯೇಂದ್ರ ದಾಸ್‌‍ (85) ಅವರು ನಿಧನರಾಗಿದ್ದಾರೆ.ಬ್ರೈನ್‌ ಸ್ಟ್ರೋಕ್‌ಗೆ ಒಳಗಾದ ಅವರು ಸಂಜಯ್‌ ಗಾಂಧಿ ಪೋಸ್ಟ್‌ ಗ್ರಾಜುಯೇಟ್‌ ಇನ್‌ಸ್ಟಿಟ್ಯೂಟ್‌‍ ಆಫ್‌ ಮೆಡಿಕಲ್‌ ಸೈನ್ಸಸ್‌‍ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ವಿಫಲವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ 20ನೇ ವಯಸ್ಸಿನಿಂದಲೂ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸಿದರು. ನಿರ್ವಾಣಿ ಅಖಾಡದಿಂದ ಬಂದ ದಾಸ್‌‍, ಅಯೋಧ್ಯೆಯ ಅತ್ಯಂತ ಸುಲಭವಾಗಿ ಪ್ರವೇಶಿಸಬಹುದಾದ ಸಂತರಲ್ಲಿ ಒಬ್ಬರಾಗಿದ್ದರು ಮತ್ತು ಅಯೋಧ್ಯೆ ಮತ್ತು ರಾಮ ಮಂದಿರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಬಯಸುತ್ತಿರುವ ದೇಶಾದ್ಯಂತದ ಅನೇಕ ಮಾಧ್ಯಮ ಪ್ರತಿನಿಧಿಗಳಿಗೆ ಹತ್ತಿರವಾಗಿದ್ದರು.

ಡಿಸೆಂಬರ್‌ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಿದಾಗಲೂ ಮುಖ್ಯ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು.ತಾತ್ಕಾಲಿಕ ಟೆಂಟ್‌ ಅಡಿಯಲ್ಲಿ ರಾಮ್‌ ಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಸಿಎಂ ಯೋಗಿ ಆಥಿತ್ಯ ನಾಥ್‌ ,ವಿಶ್ವ ಹಿಂದೂ ಪರಿಷತ್ತಿನ ಅಯೋಧ್ಯೆ ಮೂಲದ ವಕ್ತಾರ ಶರದ್‌ ಶರ್ಮಾ ದಾಸ್‌‍ ಸೇರಿ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News