ಮುಜಾಫರ್‌ನಗರ (ಯುಪಿ), ಫೆ.13-ಮಹಿಳೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚಚೋಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಪುತ್ರಿ ಬದುಕುಳಿದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಚಿಕಿತ್ಸೆ ಮುಂದುವರೆದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ತಾಯಿ ವಿಂಟಿ ತನ್ನ ಪುತ್ರಿಯರಾದ ಸಪ್ನಾ (13) ಮತ್ತು ಸರಸ್ವತಿ (11) ಅವರಿಗೆ ವಿಷವನ್ನು ತಾನು ಕುಡಿದಿದ್ದು ಘಟನೆ ತಿಳಿದು ಅಕ್ಕ ಪಕ್ಕಸವರು ದಾವಿಸಿ ಎಲ್ಲರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಚಿಕಿತ್ಸೆ ಫಲಿಸದೆ ನಿಂತಿ ಮತ್ತು ಸಪ್ನಾ ಸಾವನ್ನಪ್ಪಿದ್ದಾರೆ ಎಂದು ಭೋಪಾ ಎಎಚ್ ಒ ಪೊಲೀಸ್ ಠಾಣೆ ವಿಜಯ್ ಕುಮಾರ್ ಹೇಳಿದ್ದಾರೆ. ಸರಸ್ವತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಗೆ ಕಾರಣ ಏನೆಂಬುದರ ಬಗ್ಗೆ ತನಿಖೆ
ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.