Monday, February 24, 2025
Homeಕ್ರೀಡಾ ಸುದ್ದಿ | Sportsಆರ್‌ಸಿಬಿಗೆ ರಜತ್ ಪಾಟಿದಾರ್ ನಾಯಕ

ಆರ್‌ಸಿಬಿಗೆ ರಜತ್ ಪಾಟಿದಾರ್ ನಾಯಕ

Rajat Patidar appointed new RCB captain for IPL 2025

ಬೆಂಗಳೂರು, ಫೆ. 13- ತೀವ್ರ ಕುತೂಹಲ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಯುವ ಆಟಗಾರ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅಂತಿಮ ಕ್ಷಣದವರೆಗೂ 2021ರ ನಂತರ ಕಿಂಗ್ ಕೊಹ್ಲಿಯೇ ಆರ್ ಸಿಬಿ ತಂಡದ ನಾಯಕರಾಗುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ತಂಡದ ಫ್ರಾಂಚೈಸಿ ರಜತ್ ಪಾಟಿದಾರ್ ಗೆ ಕ್ಯಾಪ್ಟನ್ಸಿ ಹೊಣೆ ನೀಡಿ ತಂಡದ ಭವಿಷ್ಯದ ನಾಯಕರಾಗಿ ಘೋಷಿಸಿದ್ದಾರೆ. ಪಾಟಿದಾರ್ ಆರ್ ಸಿಬಿಯ 8ನೇ ನಾಯಕರಾಗಿದ್ದಾರೆ.

2021ರಿಂದ ಬೆಂಗಳೂರು ತಂಡದ ಭಾಗವಾಗಿರುವ ಮಹಾರಾಷ್ಟ್ರ ಮೂಲದ ರಜತ್ ಪಾಟಿದಾರ್ 2022ರ ಎಲಿಮಿನೇಟರ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆಕರ್ಷಕ ಶತಕ (112ರನ್) ಸಿಡಿಸಿ ತಂಡದ ಗೆಲುವಿಗೆ ಸಹಕರಿಸಿದ್ದರು.

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ನ ಹದಿನೇಳನೇ ಆವೃತ್ತಿಯಲ್ಲಿ ರಜತ್ ಪಾಟಿದಾರ್ 15 ಪಂದ್ಯಗಳಿಂದ 5 ಅರ್ಧಶತಕಗಳ ನೆರವಿನಿಂದ 395 ರನ್ ಗಳಿಸಿ ಫ್ರಾಂಚೈಸಿಯ ಗಮನ ಸೆಳೆದಿದ್ದು, ಈಗ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.

ನಾಯಕತ್ವ ಸಂತಸ ತಂದಿದೆ: ಪಾಟಿದಾರ್
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ತಂಡವಾಗಿರುವ ಆರ್ ಸಿಬಿ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ. ಈಗಾಗಲೇ ದೇಶಿ ಕ್ರಿಕೆಟ್ ನಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ರಜತ್, ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಅಲ್ಲದೆ ಸ್ಫೋಟಕ ಪ್ರದರ್ಶನ ತೋರಿ 10 ಪಂದ್ಯಗಳಿಂದ 186.08 ಸ್ಟೈಕ್ ರೇಟ್ ನಲ್ಲಿ 428 ರನ್ ಗಳಿಸಿ ಟೂರ್ನಿಯ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

ಐಪಿಎಲ್ ದಾಖಲೆ:
2021ರಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ ರಜತ್ ಪಾಟಿದಾರ್ ಇದುರೆಗೂ ಆಡಿರುವ 27 ಪಂದ್ಯಗಳಿಂದ 158.86 ಸ್ಟೈಕ್ ರೇಟ್ ನಲ್ಲಿ 1 ಶತಕ ಹಾಗೂ 7 ಅರ್ಧಶತಕಗಳ ನೆರವಿನಿಂದ 799 ರನ್ ಸಿಡಿಸಿದ್ದಾರೆ.

RELATED ARTICLES

Latest News