Sunday, February 23, 2025
Homeಮನರಂಜನೆವಿನಯ್ ರಾಜ್‌ ಕುಮಾರ್‌ಗೆ ದುನಿಯಾ ವಿಜಿ ಪುತ್ರಿ ಜೋಡಿ

ವಿನಯ್ ರಾಜ್‌ ಕುಮಾರ್‌ಗೆ ದುನಿಯಾ ವಿಜಿ ಪುತ್ರಿ ಜೋಡಿ

Duniya Vijay’s Daughter Monisha Debuts In ‘City Lights’ With Vinay Rajkumar

ಸ್ಯಾಂಡಲ್‌ವುಡ್‌ನ ಬ್ಲಾಕ್ ಕೋಬ್ರ ದುನಿಯಾ ವಿಜಯ್ ನಟನೆ, ನಿರ್ದೇಶನ, ನಿರ್ಮಾಣ ಎಲ್ಲಾ ಕ್ಷೇತ್ರಗಳಲ್ಲೂ ಸಕ್ಸಸ್ ಕಂಡ ಹೀರೋ…ಇದೀಗ ವಿಜಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ಸಿನಿಮಾರಂಗಕ್ಕೆ ಕರೆತಂದಿದ್ದಾರೆ.

ಈಗಾಗಾಲೇ ಮೊದಲ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಎರಡನೇ ಪುತ್ರಿಯ ಸರದಿ. ಸಿಟಿ ಲೈಟ್ಸ್ ಸಿನಿಮಾ ಮೂಲಕ ವಿಜಿ 2ನೇ ಪುತ್ರಿ ಮೋನಿಷಾ ಸಿನಿಮಾರಂಗಕ್ಕೆ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾಗೆ ವಿನಯ್ ರಾಜ್‌ಕುಮಾ‌ರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆದ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ಸಿಟಿ ಲೈಟ್ಸ್ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಾಘವೇಂದ್ರ ರಾಜ್ ಕುಮಾರ್ ದಂಪತಿ ಕ್ಲಾಪ್ ಮಾಡುವ ಮೂಲಕ ಮಗನ ಚಿತ್ರಕ್ಕೆ ಶುಭಕೋರಿದರು. ವಿಶೇಷ ಎಂದರೆ ಸಿಟಿ ಲೈಟ್ಸ್ ಚಿತ್ರಕ್ಕೆ ದುನಿಯಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಮಗಳ ಚೊಚ್ಚಲ ಸಿನಿಮಾದ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ನಿರ್ಮಾಣವನ್ನು ವಹಿಸಿಕೊಂಡಿದ್ದಾರೆ.

ಸಿಟಿ ಲೈಟ್ಸ್ ಸಿನಿಮಾದ ಫಸ್ಟ್ ಲುಕ್ ಈ ಮೊದಲೇ ಬಿಡುಗಡೆಯಾಗಿ ವೈರಲ್ ಆಗಿತ್ತು. ಇದೀಗ ಬಿಡುಗಡೆಯಾಗಿರುವ ಪೋಸ್ಟರ್ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ. ಸಿಟಿ ಲೈಟ್ಸ್ ಟೈಟಲ್ ಜೊತೆಗೆ ಜವಾಬ್ ದಾರಿ ದೀಪಗಳು ಟ್ಯಾಗ್‌ ಲೈನ್ ಗಮನ ಸೆಳೆಯುತ್ತಿದೆ.

ಮುಹೂರ್ತದ ಬಳಿಕ ಮಾತನಾಡಿದ ವಿನಯ್. ವಿಜಯ್ ಸರ್, ಚರಣ್ ರಾಜ್ ಹಾಗೂ ಮಾಸ್ತಿ ಅವರ ಜೊತೆ ಕೆಲಸ ಮಾಡಲು ತುಂಬ ಖುಷಿ ಆಗುತ್ತೆ. ಇವರೆಲ್ಲರ ಜೊತೆ ಕೆಲಸ ಮಾಡಬೇಕು ಎನ್ನುವುದು ಇತ್ತು, ಈಗ ಅವಕಾಶ ಸಿಕ್ಕಿದೆ. ಊರಿಂದ ಇಬ್ಬರು ಬೆಂಗಳೂರಿಗೆ ಬಂದು ಬಳಿಕ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದೆ ಸಿನಿಮಾ ಎಂದರು.

ಇನ್ನು ನಿರ್ದೇಶಕ ದುನಿಯಾ ವಿಜಯ್ ಮಾತನಾಡಿ, ವಿನಯ್ ತುಂಬಾ ಒಳ್ಳೆಯ ವ್ಯಕ್ತಿ. ನನ್ನ ಜೊತೆ ನನ್ನ ಹಾಗೆ ಇರುವ ಜೀವ. ಅಣ್ಣಾವ್ರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಈಗ ಅವರ ಮೊಮ್ಮಕ್ಕಳಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ನಾನು ಯಾವುದು ತಂಡ ಕಟ್ಟಿಲ್ಲ, ಒಬ್ಬನೆ ಬೆಳೆದವನು ನಾನು, ನನಗೆ ಯಾರ ಸಪೋರ್ಟ್ ಇರಲಿಲ್ಲ. ನನ್ನ ಛಲ ನನ್ನನ್ನು ಇಲ್ಲಿಗೆ ಕರ್ಕೊಂಡು ಬಂದಿದೆ ಎಂದರು.

RELATED ARTICLES

Latest News