Tuesday, February 25, 2025
Homeಅಂತಾರಾಷ್ಟ್ರೀಯ | Internationalಅಮೆರಿಕ ವಿದೇಶಾಂಗ ಕಾರ್ಯದರ್ಶಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯಾಂತ್ರಿಕ ಸಮಸ್ಯೆ

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಯಾಂತ್ರಿಕ ಸಮಸ್ಯೆ

Plane carrying Secretary of State Rubio to Europe turned around because of a mechanical issue

ವಾಷಿಂಗ್ಟನ್, ಫೆ.14-ಯುರೋಪ್‌ನ ಜರ್ಮನಿಯ ಮ್ಯೂನಿಚ್ ಭದ್ರತಾ ಸಮ್ಮೇಳನಕ್ಕಾಗಿ ತೆರಳುತ್ತಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಸೆನೆಟ್ ವಿದೇಶಾಂಗ ಸಂಬಂಧ ಸಮಿತಿ ಅಧ್ಯಕ್ಷ ಸೆನ್ ಜಿಮ್ ರಿಶ್ ಅವರಿದ್ದ ವಾಯುಪಡೆಯ ವಿಮಾನವು ಯಾಂತ್ರಿಕ ಸಮಸ್ಯೆಯಿಂದ ತಡರಾತ್ರಿ ವಾಷಿಂಗ್ಟನ್‌ಗೆ ಮರಳಿದೆ.

ನಿನ್ನೆ ವಾಷಿಂಗ್ಟನ್‌ನಿಂದ ಮ್ಯೂನಿಚ್‌ಗೆ ಹೋಗುವ ಮಾರ್ಗದಲ್ಲಿ ವಿಮಾನವು ಯಾಂತ್ರಿಕ ಸಮಸ್ಯೆಯನ್ನು ಅನುಭವಿಸಿದೆ ಎಂದು ಸ್ಟೇಟ್ ಡಿಪಾರ್ಟ್‌ ಮೆಂಟ್ ವಕ್ತಾರ ಟಮ್ಮಿ ಬ್ರೂಸ್ ಹೇಳಿದ್ದಾರೆ.

ಯಾವುದೇ ತೊಂದರೆ ಇಲ್ಲದೆ ವಿಮಾನವು ಹಿಂತಿರುಗುತ್ತಿದೆ ಎಂದು ಅವರು ಹೇಳಿದರು.ಸದ್ಯದಲ್ಲೇ ರೂಬಿಯೊ ಅವರು ಜರ್ಮನಿಗೆ ಮಧ್ಯ ಪ್ರಾಚ್ಯಕ್ಕೆ ಪ್ರತ್ಯೇಕ ವಿಮಾನದಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬೋಯಿಂಗ್ 757 ವಿಮಾನದ ಕಾಕ್‌ ಪಿಟ್‌ನಲ್ಲಿ ಸಮಸ್ಯೆ ಎದುರಾಗಿದ್ದು ಸುಮಾರು 90 ನಿಮಿಷಗಳ ಹಾರಾಟದ ನಂತರ ಎಚ್ಚರಿಕೆ ಸಂದೇಶದಿಂದಾಗಿ ಸ್ವದೇಶಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಪಾಧ್ಯಕ್ಷ ಜೆಡಿ ವ್ಯಾಯಾನ್ಸ್ ಅವರು ಮ್ಯೂನಿಚ್‌ನಲ್ಲಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ ಕಿಯೊಂದಿಗಿನ ಶುಕ್ರವಾರ ಬೆಳಿಗ್ಗೆ ಸಭೆ ನಡೆಯಲಿದೆ ಎನ್ನಲಾಗಿದ್ದು ಇದರರಲ್ಲಿ ರೂಬಿಯೊ ಕೂಡ ಬಾಗಿಯಾಗುವ ಸಾಧ್ಯತೆ ಇದೆ.

RELATED ARTICLES

Latest News