ಬೆಂಗಳೂರು,-14- ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂSಸಿದಂತೆ ಸಿಎಂ ಅಕೃತ ಸರ್ಕಾರಿ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಅಽಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಮೈಸೂರಿನ ಜಿಲ್ಲಾ ಕಾರಿ, ಪೊಲೀಸ್ ಆಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊದಲು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮುಂದೆ ಸೋಮವಾರ ರಾತ್ರಿ ನಡೆದ ಘಟನೆಯ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು.
ವ್ಯಕ್ತಿಯೊಬ್ಬ ಪೋಸ್ಟರ್ ಹಾಕಿದ ಬಗ್ಗೆ ದೂರು ದಾಖಲಿಸಿಕೊಂಡ ನಂತರ ಠಾಣೆಯ ಪೊಲೀಸರು ಯಾವ ರೀತಿ ಕ್ರಮ ಕೈಗೊಂಡಿದ್ದೀರಿ, ಅಂದು ರಾತ್ರಿ ಠಾಣೆ ಮುಂದೆ ಜನ ಸೇರಲು ಹೇಗೆ ಸಾಧ್ಯವಾಯಿತು, ಅಷ್ಟೊಂದು ಜನ ಸೇರಿ ಕಲ್ಲು ಎಸೆಯುತ್ತಿದ್ದಾಗ ಏನು ಮಾಡುತ್ತಿದ್ದಿರಿ ಎಂದು ಸಿಎಂ ಗರಂ ಆದರು.
ಇದೊಂದು ಸೂಕ್ಷ್ಮ ಘಟನೆ. ರಾಜ್ಯದಲ್ಲಿಈ ಹಿಂದೆ ಇಂತಹ ಘಟನೆಗಳು ನಡೆದಿವೆ. ಅವುಗಳಿಂದ ಇನ್ನೂ ನೀವು ಪಾಠ ಕಲಿತಿಲ್ಲ. ಈ ಬಗ್ಗೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿತ್ತು. ಠಾಣೆ ಬಳಿ ಜನರು ಜಮಾಯಿಸಲು ಅವಕಾಶ ಕೊಡಬಾರದಿತ್ತು. ಇನ್ನೂ ಮುಂದೆ ಸಣ್ಣ ಘಟನೆಯೂ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸಿಎಂ ಸಲಹೆ ಮಾಡಿದರು.