Tuesday, February 25, 2025
Homeರಾಜಕೀಯ | Politicsನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ : ಡಿ.ಕೆ.ಸುರೇಶ್‌

ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ : ಡಿ.ಕೆ.ಸುರೇಶ್‌

I am not an aspirant for any position: D.K. Suresh

ಬೆಂಗಳೂರು, ಫೆ.14-ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ನಮ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ವಿಶ್ರಾಂತಿ ಕೊಟ್ಟಿದ್ದಾರೆ, ಹೀಗಾಗಿ ಸದ್ಯಕ್ಕೆ ವಿಶ್ರಾಂತಿಯಲ್ಲದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುರೀಬೇಕು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಬದಲಾವಣೆ ವಿಚಾರ ಚರ್ಚೆಯಿಲ್ಲ. ಕೆಲವರು ಬೇರೆ ಬೇರೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಈಗ ಆ ವಿಚಾರ ಅಪ್ರಸ್ತುತ ಎಂದು ಹೇಳಿದರು.

ಶಾಸಕ ಮುನಿರತ್ನ ಮುಖ್ಯಮಂತ್ರಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಅವರು, ಡಾಕ್ಟರ್‌ ತಲೆಗೆ ಪೆಟ್ಟು ಬಿದ್ದಿದೆ ಅಂದಿದ್ದರು. ನಾನು ಹೇಳಿದ್ದಲ್ಲ, ತಜ್ಞ ವೈದ್ಯರು ಹೇಳಿದ್ದು. ಆ್ಯಸಿಡ್‌ ದಾಳಿಯಾಗಿ ತಲೆಗೆ ಪೆಟ್ಟು ಬಿದ್ದಿದೆ, ತಲೆ ಕೆಟ್ಟಿದೆ ಎಂದಿದ್ದರು. ಅವರ ಸಲಹೆ ಪಡೆದು ಆಸ್ಪತ್ರೆಗೆ ತೋರಿಸಲಿ ಎಂದು ಟೀಕಿಸಿದರು.

ಹೈದರಾಬಾದ್‌ಗಿಂತ ಬೆಂಗಳೂರು ಹಿಂದೆ ಹೋಗಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಸಂಚು ಕುತಂತ್ರ ಎಲ್ಲ ಗೊತ್ತಿದೆ. ಅವರ ಸಂಚನ್ನು ಬೇರೆಯವರಿಗೆ ತಿಳಿಸುತ್ತಿದ್ದಾರೆ. ಮೊದಲೇ ತಿಳಿಸೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಯಾವ ಯಾವ ಪೊಲೀಸ್‌‍ ಠಾಣೆಯಲ್ಲಿ ಕೇಸ್‌‍ ಇದೆ. ಯಾರು ಯಾರಿಗೆ ತೊಂದರೆ ಕೊಟ್ಟಿದ್ದಾರೆ.

ಅದು ಮಂದುವರಿಯಬಹುದು. ಅದೇ ಕಾರಣಕ್ಕೆ ಈಗ ಹೀಗೆ ಮಾಡುತ್ತಿರಬಹದು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಂಚತಾರ ಹೋಟೆಲ್‌ಗೆ ಹೋಗಲ್ಲ. ಅಂತಾದ್ದೇನೇ ಇದ್ದರೂ ಅದು ಬಿಜೆಪಿ ಸಂಸ್ಕೃತಿ. ಅವರು ಯಾರಿಗೆ ಏನೇನು ಮಾಡಿದ್ದಾರೆ ಗೊತ್ತಿದೆ. ಮೊದಲು ಆರೋಪದಿಂದ ಹೊರಬರಲಿ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರವಿದೆ ಎಂದು ಆರೋಪಿಸಿದ ಅವರು, ನಮ ಮೆಟ್ರೋ ರೈಲು ನಿರ್ವಹಣೆ ಕೇಂದ್ರದ ಕೈನಲ್ಲಿದೆ. ಅದು ರಾಜ್ಯಸರ್ಕಾರದ ಅಧೀನದಲ್ಲಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬಹುದಷ್ಟೇ. ಮೆಟ್ರೋ ಮಂಡಳಿಯ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದರು.

ಸಂಸದರ ಹೇಳಿಕೆಯನ್ನ್ನು ನಾನು ನೋಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರ ಮುಂದೆ ಬೇಡಿಕೆ ಇಟ್ಟು, ಮೆಟ್ರೋಗೆ ಕೇಂದ್ರದ ಸಹಕಾರ ಹೆಚ್ಚಿಸಲಿ. ನಮ ತೆರಿಗೆ ಪಾಲಿನ ಹಣವನ್ನು ಕೊಡಿಸಲಿ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ತೆರಿಗೆ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ನಮ ತೆರಿಗೆ ಹಣವನ್ನು ಕೊಡುತ್ತಿಲ್ಲ. ದಕ್ಷಿಣ ಭಾರದಲ್ಲಿ ಎಲ್ಲವೂ ಬಿಜೆಪಿಯೇತರ ರಾಜ್ಯಗಳೇ ಆಗಿರುವುದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News