ಬೆಂಗಳೂರು, ಫೆ.14- ಇಂದು ಪ್ರೇಮಿಗಳ ದಿನ, ಪ್ರೇಮಿಗಳು ಹಾಡಿ ಕುಣಿದು ಕುಪ್ಪಳಿಸುವ ದಿನ. ನಿಮಗೆ ಯಾರು ಬಾಯ್ ಫ್ರೆಂಡ್ ಗಳು ಇಲ್ಲವೇ ಡೋಂಟ್ ವರಿ ನೀವು ಕೇವಲ 389
ರೂ. ಕೊಟ್ಟರೆ ನಿಮಗೊಬ್ಬ ಸ್ನೇಹಿತ ಸಿಗುತ್ತಾನೆ. ಅರೇ ಇದೇನಿದು ಅಂಡ್ಕೊಂಡ್ರೆ ಹಾಗಾದ್ರೆ ಈ ಸ್ಟೋರಿ ಓದಿ.
ಫೆ.14ಅನ್ನು ಪ್ರೇಮಿಗಳ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ತಮ್ಮ ಗೆಳೆಯ, ಗೆಳತಿಗೆ ಪ್ರೋಫಸಲ್ ಮಾಡಲು ಕೆಲವು ಕಾಯುತ್ತಿದ್ದರೆ ಇನ್ನು ಕೆಲವು ಪ್ರೇಮಿಗಳು ಹಾಡಿ ಕುಣಿದು ಕುಪ್ಪಳಿಸಲಿದ್ದಾರೆ. ಇನ್ನು ಕೆಲವರು ನಮಗೆ ಯಾರು ಪ್ರೇಮಿಗಳಿಲ್ಲ ಎಂದು ಕೊರಗುತ್ತಾರೆ ಅಂತಹ ಕೊರಗು ನಿವಾರಣೆಗೆ ಕೆಲವರು ಹೊಸ ಐಡಿಯಾ ಕಂಡುಕೊಂಡಿದ್ದಾರೆ.
ಅದು ಏನೆಂದರೆ ನೀವು ದುಡ್ಡು ಕೊಟ್ಟರೆ ನಿಮಗೆ ಒಂದು ದಿನದ ಬಾಯ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ ಎನ್ನುವ ಜಾಹೀರಾತುಗಳು ನಗರದ ಕೆಲವೆಡೆ ರಾರಾಜಿಸುತ್ತಿರುವುದು ಕಂಡುಬಂದಿದೆ.
ನಗರದ ಹೃದಯಭಾಗದಲ್ಲಿರುವ ಜಯನಗರದಲ್ಲಿ ಇಂತಹ ಜಾಹೀರಾತು ಫಲಕಗಳು ಕಂಡುಬಂದಿದ್ದು, ನೀವು ಕೇವಲ 389 ರೂ.ಗಳನ್ನು ಪಾವತಿಸಿದರೆ ನಿಮಗೆ ಒಂದು ದಿನದ ಬಾಯ್‌ಫ್ರೆಂಡ್ ಸಿಗುತ್ತಾರೆ ಎಂಬ ಪೋಸ್ಟರ್‌ಗಳನ್ನು ಹಾಕಲಾಗಿದೆ.
ನೀವು ಮಾಡಬೇಕಾಗಿರುವುದು ಇಷ್ಟೆ ಪೋಸ್ಟರ್ ನಲ್ಲಿ ಹಾಕಲಾಗಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ 389 ರೂ.ಗಳನ್ನು ಪಾವತಿಸಿ ಎಂದು ಸೂಚಿಸಲಾಗಿದೆ. ಅದು ಸುಮ್ಮಂತರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ ಈ ರೀತಿಯ ಪೋಸ್ಟರ್‌ಗಳನ್ನು ಹಾಕಿರುವುದಕ್ಕೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ರಾತ್ರೋರಾತ್ರಿ ಇಂತಹ ಪೋಸ್ಟರ್ ಹಾಕಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ. ಒಂದು ಚಾನ್ಸ್ ನೋಡೇ ಬಿಡೋಣ ಅಂತ ನೀವು ಸ್ಕ್ಯಾನ್ ಮಾಡಿ ಹಣ ಕಳೆದುಕೊಂಡರೆ ನಾವು ಮಾತ್ರ ಜವಬ್ದಾರರಲ್ಲ.