Wednesday, February 26, 2025
Homeರಾಷ್ಟ್ರೀಯ | Nationalಮುಂದಿನ ಮುಖ್ಯ ಚುನಾವಣಾ ಆಯುಕ್ತ ಆಯ್ಕೆಗೆ ಮುಂದಿನ ವಾರ ಸಭೆ

ಮುಂದಿನ ಮುಖ್ಯ ಚುನಾವಣಾ ಆಯುಕ್ತ ಆಯ್ಕೆಗೆ ಮುಂದಿನ ವಾರ ಸಭೆ

PM Modi, LoP Rahul Gandhi to meet on Feb 17 to name CEC Rajiv Kumar’s successor

ನವದೆಹಲಿ,ಫೆ.15- ಮುಂದಿನ ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಆಯ್ಕೆ ಸಮಿತಿ ಮುಂದಿನ ವಾರದ ಆರಂಭದಲ್ಲಿ ಸಭೆ ಸೇರಲಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಕ್ಯಾಬಿನೆಟ್ ಸಚಿವರು ಈ ಸಮಿತಿಯ ಭಾಗವಾಗಿದ್ದಾರೆ. ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಬಿಸಿ) ರಾಜೀವ್ ಕುಮಾರ್ ಅವರು ಫೆಬ್ರವರಿ 18ರಂದು ನಿವೃತ್ತರಾಗುವ ಮೊದಲು ಸಮಿತಿಯು ಸೋಮವಾರ ಸಭೆ ಸೇರುವ ಸಾಧ್ಯತೆ ಇದೆ.

ಶೋಧನಾ ಸಮಿತಿಯು ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪೈಕಿ ಒಬ್ಬರ ಹೆಸರನ್ನು ಸಮಿತಿಯು ಶಿಫಾರಸು ಮಾಡಲಿದೆ. ನಂತರ ರಾಷ್ಟ್ರಪತಿಗಳು ಶಿಫಾರಸಿನ ಆಧಾರದ ಮೇಲೆ ಮುಂದಿನ ಸಿಇಸಿರವರನ್ನು ನೇಮಕ ಮಾಡಲಿದ್ದಾರೆ. ಪ್ರಸ್ತುತ ರಾಜೀವ್ ಕುಮಾರ್ ಅವರನ್ನು ಹೊರತು ಪಡಿಸಿದರೆ ಜ್ಞಾನೇಶ್‌ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಅಧಿಕಾರಾವಧಿ ಜನವರಿ 26, 2029 ರವರೆಗೆ ಇದೆ. ಸುಬ್ಬರ್ ಸಿಂಗ್ ಸಂಧು ಅವರು ಮತ್ತೊಬ್ಬ ಚುನಾವಣಾ ಆಯುಕ್ತರಾಗಿದ್ದಾರೆ.

ಅತ್ಯಂತ ಹಿರಿಯ ಚುನಾವಣಾ ಆಯುಕ್ತರನ್ನು (ಇಸಿ) ಅಧಿಕಾರದಲ್ಲಿರುವವರ ನಿವೃತ್ತಿಯ ನಂತರ ಸಿಇಸಿಯಾಗಿ ಬಡ್ತಿ ನೀಡುವುದು ಈವರೆಗೆ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು. ಆದರೆ ಕಳೆದ ವರ್ಷ ಸಿಇಸಿ ಮತ್ತು ಇಸಿಗಳ ನೇಮಕಾತಿಗೆ ಸಂಬಂಧಿಸಿದ ಹೊಸ ಕಾನೂನು ಜಾರಿಗೆ ಬಂದ ನಂತರ, ಶೋಧನಾ ಸಮಿತಿಯು ಐದು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಹೆಸರುಗಳನ್ನು ಹುದ್ದೆಯ ನೇಮಕಾತಿಗಾಗಿ ಶಾರ್ಟ್ ಲಿಸ್ಟ್ ಮಾಡಿ ಪ್ರಧಾನಿ ನೇತೃತ್ವದ ಸಮಿತಿಗೆ ಸಲ್ಲಿಸುತ್ತದೆ.

ಸಿಐಸಿ ಮಾತ್ರವಲ್ಲದೆ ರಾಜೀವ್ ಕುಮಾರ್ ಅವರ ನಿವೃತ್ತಿಯಿಂದ ಸೃಷ್ಟಿಯಾಗಲಿರುವ ಖಾಲಿ ಸ್ಥಾನವನ್ನು ತುಂಬಲು ಹೊಸ ಚುನಾವಣಾ ಆಯುಕ್ತರನ್ನು ಕೂಡ ನೇಮಿಸುವ ಸಾಧ್ಯತೆ ಇದೆ. ಸಿಇಸಿಯನ್ನು ನೇಮಿಸಲು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ಯ ನಿಬಂಧನೆಗಳನ್ನು ಇದೇ ಮೊದಲ ಬಾರಿಗೆ ಅನ್ವಯಿಸಲಾಗುತ್ತಿದೆ.

ಕಾನೂನಿನ ಪ್ರಕಾರ, ಸಿಇಸಿ ಮತ್ತು ಇತರ ಇಸಿಗಳ ಹುದ್ದೆಗೆ ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಗೆ ಸಮಾನವಾದ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡಲಾಗುತ್ತದೆ ಮತ್ತು ಇವರು ಚುನಾವಣೆಗಳ ನಿರ್ವಹಣೆಯಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ.

RELATED ARTICLES

Latest News