ವಿಯೆನ್ನಾ, ಫೆ.16-ದಕ್ಷಿಣ ಆಸ್ಟ್ರಿಯಾದಲ್ಲಿ ಯುವಕನೊಬ್ಬ ಏಕಾಏಕಿ ಚಾಕುವಿನಿಂದ ದಾರಿಹೋಕರನ್ನು ಇರಿದ ಪರಿಣಾಮ 14 ವರ್ಷದ ಬಾಲಕ ಸಾವನ್ನಪ್ಪಿ,ಐದು ಮಂದಿ ಗಾಯಗೊಂಡಿದ್ದಾರೆ.
ವಿಲ್ಲಾಚ್ ನಗರದಲ್ಲಿ ದಾಳಿ ನಡೆದ ಸ್ಥಳದಲ್ಲಿಯೇ ಶಂಕಿತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಸಿರಿಯ ದೇಶದ ಪ್ರಜೆ ಎಂದು ಅವರು ಹೇಳಿದರು. ದಾಳಿಕೋರನ ವೈಯಕ್ತಿಕ ಹಿನ್ನೆಲೆಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಆಹಾರ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ಕಾರಿನಿಂದ ಘಟನೆಯನ್ನು ವೀಕ್ಷಿಸಿ ನಂತರ ಪೊಲೀಸರು ತಿಳಿಸಿದ್ದಾರೆ.
ನಂತರ ದಾಳಿಕೋರನ ತಡೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇರಿತಕ್ಕೆ ಒಳಗಾದವರು ಪುರುಷರಾಗಿದ್ದು ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡರು ಮತ್ತು ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರಿಯನ್ ಪ್ರಾಂತ್ಯದ ಕ್ಯಾರಿಂಥಿಯಾದ ಗವರ್ನರ್ ಪೀಟರ್ ಕೈಸರ್ ಅವರು ಬಾಲಕನ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಆಂತರಿಕ ಸಚಿವಾಲಯದ ಪ್ರಕಾರ, 2024 ರಲ್ಲಿ ಆಸ್ಟ್ರಿಯಾದಲ್ಲಿ ಆಶ್ರಯಕ್ಕಾಗಿ 24,941 ವಿದೇಶಿಯರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಅತಿದೊಡ್ಡ ಗುಂಪು ಸಿರಿಯಾದಿಂದ ಬಂದಿದ್ದು, ನಂತರ ಅಫ್ಘಾನಿಸ್ತಾನದಿಂದ ಬಂದವರು.
ಕಳೆದ ಎರಡು ವರ್ಷಗಳಲ್ಲಿ, ಆಶ್ರಯ ಪಡೆಯುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. 2022 ರಲ್ಲಿ, ಅರ್ಜಿಗಳು 1 ಲಕ್ಷಕ್ಕಿಂತ ಹೆಚ್ಚಿದ್ದವು, ಆದರೆ 2023 ರಲ್ಲಿ ಸುಮಾರು 59,000 ವ್ಯಕ್ತಿಗಳು ಆಶ್ರಯ ಕೋರಿದರು. ಆಸ್ಟ್ರಿಯಾದಲ್ಲಿ, ಕಳೆದ ವರ್ಷದ ಚುನಾವಣೆಗೆ ಮುನ್ನ ವಲಸೆಯು ಪ್ರಮುಖ ವಿಷಯವಾಗಿತ್ತು, ಇದರ ಪರಿಣಾಮವಾಗಿ ತೀವ್ರ ಬಲಪಂಥೀಯ ಫ್ರೀಡಂ ಪಾರ್ಟಿ ಎರಡನೇ ಮಹಾಯುದ್ದದ ನಂತರ ತನ್ನ ಮೊದಲ ರಾಷ್ಟ್ರೀಯ ಚುನಾವಣಾ ವಿಜಯವನ್ನು ಸಾಧಿಸಿತು.