Tuesday, February 25, 2025
Homeರಾಜ್ಯಅಮೇರಿಕಾದ ಜೊತೆಗಿನ ವಿದೇಶಾಂಗ ನೀತಿ ಬದಲಿಸುವಂತೆ ಪ್ರಧಾನಿ ಮೋದಿಗೆ ಗುಂಡೂರಾವ್ ಆಗ್ರಹ

ಅಮೇರಿಕಾದ ಜೊತೆಗಿನ ವಿದೇಶಾಂಗ ನೀತಿ ಬದಲಿಸುವಂತೆ ಪ್ರಧಾನಿ ಮೋದಿಗೆ ಗುಂಡೂರಾವ್ ಆಗ್ರಹ

Gundurao urges PM Modi to change foreign policy with US

ಬೆಂಗಳೂರು,ಫೆ.17- ಅಮೇರಿಕವು ವಲಸಿಗ ಭಾರತೀಯರನ್ನು ಕಳಿಸುವ ಸಂದರ್ಭದಲ್ಲಿ ಅಮಾನವೀಯವಾಗಿ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇನ್ನಾದರೂ ಅಮೇರಿಕದ ಜೊತೆಗಿನ ವಿದೇಶಾಂಗ ನೀತಿ ಬದಲಾಯಿಸುವತ್ತ ಚಿತ್ತ ಹರಿಸಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಯಂಘೋಷಿತ ವಿಶ್ವಗುರು ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದಾಗಲೇ 116 ವಲಸಿಗ ಭಾರತೀಯರನ್ನು ಅಮೆರಿಕ ಕೋಳ ಹಾಕಿ ಭಾರತಕ್ಕೆ ಕಳಿಸಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ಯಾವುದಿದೆ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ 104 ವಲಸಿಗ ಭಾರತೀಯರನ್ನು ಅಮೆರಿಕವು ಕೋಳ- ಸರಪಳಿ ಹಾಕಿ ಕಳಿಸುವ ಮೂಲಕ ಅಮಾನವೀಯವಾಗಿ ವರ್ತಿಸಿತ್ತು. ಈಗ ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಮತ್ತದೇ ಧಾರ್ಷ್ಟ್ಯ ತೋರಿದೆ. ಇಷ್ಟಾದರೂ ಮೋದಿ ಬಾಬಾ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮೋದಿಯವರು ಅಮೆರಿಕದಲ್ಲಿರುವಾಗಲೇ ಆ ದೇಶ ಭಾರತೀಯ ನಾಗರಿಕರನ್ನು ತುಚ್ಛವಾಗಿ ನಡೆಸಿಕೊಂಡಿದೆ. ಇದರರ್ಥ ಮೋದಿಯವರನ್ನು ಅಮೆರಿಕ ಲೆಕ್ಕಕ್ಕೇ ಇಟ್ಟಿಲ್ಲ ಎಂದು ಭಾಸವಾಗುತ್ತಿದೆ. ಮೋದಿಯವರು ಮನೆಯಲ್ಲಿ ಹುಲಿ, ಬೀದಿಯಲ್ಲಿ ಇಲಿಯಂತಾದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿರುವ ಅವರು, ಸ್ವಾಭಿಮಾನ ಬಿಟ್ಟು ವರ್ತಿಸಿದರೆ ಅಮೆರಿಕ ಮೋದಿಯವರನ್ನು ಹಾಕು ಮಣೆ-ನೂಕು ಮಣೆ-ಯಾಕೆ ಮಣೆ? ಎಂಬಂತೆ ಸತ್ಕಾರ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Latest News