ಬೆಂಗಳೂರು, ಫೆ.17- ಮೆಟ್ರೋ ದರ ಕಡಿತಗೊಳಿಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚನೆ ನೀಡಿದರೂ ಕ್ಯಾರೆ ಎನ್ನದೆ ದರ ಇಳಿಕೆ ಮಾಡಲು ಮೀನಾಮೇಷ ಎಣಿಸುತ್ತಿರುವ ಮೆಟ್ರೋ ಅಧಿಕಾರಿಗಳಿಗೆ ಪ್ರಯಾಣಿಕರು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.
ದರ ಏರಿಕೆಯಿಂದ ರೋಸಿ ಹೋಗಿರುವ ಪ್ರಯಾಣಿಕರು ಮೆಟ್ರೋ ಬದಲಿಗೆ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವುದರಿಂದ ಮೆಟ್ರೋ ರೈಲುಗಳು ಬಿಕೋ ಎನ್ನುತ್ತಿವೆ. ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಲಕ್ಷಾಂತರ ಮಂದಿ ಮೆಟ್ರೋ ರೈಲು ಬಳಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ದರ ಏರಿಕೆಯಾದ ಕಳೆದ 6 ದಿನಗಳಿಂದ ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 4 ಲಕ್ಷದಷ್ಟು ಇಳಿಕೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಎಷ್ಟೆಷ್ಟು
1.ದರ ಏರಿಕೆಯ ಹಿಂದಿನ ಭಾನುವಾರ 6,37,884
ದರ ಏರಿಕೆಯ ಮೊದಲ ದಿನ(ಭಾನುವಾರ): 6,23,123
ಇಳಿಕೆ: 14,761
2.ದರ ಏರಿಕೆಯ ಹಿಂದಿನ ಸೋಮವಾರ :8,70,147
ದರ ಏರಿಕೆಯ ನಂತರದ ಸೋಮವಾರ: 8,28,149
ಪ್ರಯಾಯಾಣಿಕರ ಇಳಿಮುಖ: 41998
- ದರ ಏರಿಕೆಯ ಹಿಂದಿನ ಮಂಗಳವಾರ – 8,58,417
ದರ ಏರಿಕೆಯ ನಂತರದ ಮಂಗಳವಾರ: 7,78,774
ಇಳಿಮುಖ:79643
4.ದರ ಏರಿಕೆಯ ಹಿಂದಿನ ಬುಧವಾರ – 8,67,660
ದರ ಏರಿಕೆಯ ನಂತರದ ಬುಧವಾರ:7,62,811
ಇಳಿಮುಖ:1,04,849
5.ದರ ಏರಿಕೆಯ ಹಿಂದಿನ ಗುರುವಾರ – 8,64,601
ದರ ಏರಿಕೆಯ ನಂತರದ ಗುರುವಾರ:7,51,251
ಇಳಿಮುಖ:1,13,350
6.ದರ ಏರಿಕೆಯ ಹಿಂದಿನ ಶುಕ್ರವಾರ -8,70,687
ದರ ಏರಿಕೆಯ ನಂತರದ ಶುಕ್ರವಾರ: 7,63,250
ಇಳಿಮುಖ: 1,07,437
7.ದರ ಏರಿಕೆಯ ಹಿಂದಿನ ಶನಿವಾರ – 6.90 ಲಕ್ಷ
ದರ ಏರಿಕೆಯ ನಂತರದ ಶನಿವಾರ: 7,42
ಇಳಿಮುಖ: 52 ಸಾವಿರ