Monday, February 24, 2025
Homeಆರೋಗ್ಯ / ಜೀವನಶೈಲಿಅಪರೂಪದ ಕಾಯಿಲೆ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಯಶಸ್ವಿ ಚಿಕಿತ್ಸೆ

ಅಪರೂಪದ ಕಾಯಿಲೆ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಅಪರೂಪದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಅಸ್ಸಾಂ ಮೂಲದ 42 ವರ್ಷದ ಮಹಿಳೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ಔಷಧ – ಹಿರಿಯ ಸಲಹೆಗಾರರಾದ ಮನೀಶಾ ಸಿಂಗ್ ಅವರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಎರಡು ದಿನಗಳ ನಂತರ ರೋಗಿಯನ್ನು ಬಿಡುಗಡೆ ಮಾಡಲಾಯಿತು.

ಈ ಕುರಿತು ಮಾತನಾಡಿದ ಡಾ. ಮನೀಶಾ ಸಿಂಗ್ , ಕೆಟ್ಕಿ (ಹೆಸರು ಬದಲಾಗಿದೆ) ರೋಗಿಯು ಒಂದು ತಿಂಗಳ ಕಾಲ ಜ್ವರದಿಂದ ಬಳಲುತ್ತಿದ್ದರು, ಜೊತೆಗೆ ಉಸಿರಾಟ, ರಕ್ತಹೀನತೆ, ಹೊಟ್ಟೆ ನೋವು ಮತ್ತು ಮೂತ್ರವನ್ನು ಹಾದುಹೋಗುವಲ್ಲಿ ತೊಂದರೆ ಅನುಭವಿಸುತ್ತಿದ್ದರು. ಅವರ ಎಂಡೊಮೆಟ್ರಿಯೊಸಿಸ್ ಲೆಪ್ಟೊಸ್ಪೈರಾ (ಸುರುಳಿಯಾಕಾರದ ಆಕಾರದ ಬ್ಯಾಕ್ಟೀರಿಯಾ) ಸೋಂಕಿನ ನಂತರದ ಬಾವು ಆಗಿ ಅಭಿವೃದ್ಧಿ ಹೊಂದಿತು. ಇದು ಕಲುಷಿತ ನೀರು, ಮಣ್ಣು ಅಥವಾ ಪ್ರಾಣಿಗಳ ಮೂತ್ರದ ಮೂಲಕ ಹರಡುತ್ತದೆ, ಕಡಿತ, ಸವೆತ, ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ಈ ಸೋಂಕು ದೇಹವನ್ನು ಪ್ರವೇಶಿಸುತ್ತದೆ.

ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಾದುಹೋಗುವ ಕಾಯಿಲೆಯಾಗಿದ್ದು, ಈ ಸಮಸ್ಯೆಯಿಂದ ಕೆಟ್ಕಿ ಅವರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಕಷ್ಟವಾಗುತ್ತಿತ್ತು. ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಸೂಕ್ತ ಚಿಕಿತ್ಸೆ ದೊರೆತಿರಲಿಲ್ಲ, ಬಳಿಕ ಅವರು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು, ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನದ ನಂತರ, ಆಕೆಗೆ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್ ಸಮಸ್ಯೆ ಎಂದು ಗುರುತಿಸಲಾಯಿತು, ಇದು ಅಪರೂಪದ ಸ್ಥಿತಿಯಾಗಿದ್ದು, ಸೋಂಕು ಗರ್ಭಾಶಯದೊಳಗೆ ಪ್ರವೇಶಿಸಿ, ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿತ್ತು.

ಶಸ್ತ್ರಚಿಕಿತ್ಸೆ ಸಮಯದಲ್ಲಿ ಇವರಿಗೆ 14 ಸೆಂ.ಮೀ ಚೀಲ ಮತ್ತು ಅಂಡಾಶಯದಲ್ಲಿ ಕೀವು ತುಂಬುದ್ದ ದ್ರವ್ಯರಾಶಿ ಕಂಡುಬಂದಿದೆ. ಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡು ಸೋಂಕು ಮತ್ತು ಸಂಬಂಧಿತ ತೊಡಕುಗಳನ್ನು ಪರಿಹರಿಸಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದೆವು. ಶಸ್ತ್ರಚಿಕಿತ್ಸೆ ಸುಮಾರು ಒಂದು ಗಂಟೆಯವರೆಗೆ ನಡೆಯಿತು ಎಂದು ವಿವರಿಸಿದರು.

RELATED ARTICLES

Latest News