Tuesday, February 25, 2025
Homeಅಂತಾರಾಷ್ಟ್ರೀಯ | Internationalಅಮೆರಿಕದಿಂದ ಗಡೀಪಾರಾದ ಅಕ್ರಮ ವಲಸೆಗಾರರನ್ನು ಸ್ವೀಕರಿಸಲು ಮುಂದಾದ ಕೋಸ್ಟಾರಿಕಾ

ಅಮೆರಿಕದಿಂದ ಗಡೀಪಾರಾದ ಅಕ್ರಮ ವಲಸೆಗಾರರನ್ನು ಸ್ವೀಕರಿಸಲು ಮುಂದಾದ ಕೋಸ್ಟಾರಿಕಾ

Costa Rica offers to receive deported Indians and central Asian migrants from US

ಕೋಸ್ಟಾರಿಕಾ, ಫೆ.18- ಅಮೆರಿಕದಿಂದ ಗಡೀಪಾರು ಮಾಡುತ್ತಿರುವ ಇತರ ದೇಶಗಳ ಅಕ್ರಮ ವಲಸಿಗರನ್ನು ಸ್ವೀಕರಿಸುವುದಾಗಿ ಸೆಂಟ್ರಲ್ ಅಮೆರಿಕನ್ ರಾಷ್ಟ್ರವಾದ ಕೋಸ್ಟರಿಕಾ ಹೇಳಿದೆ. ಈ ತಿಂಗಳ ಆರಂಭದಲ್ಲಿ ಕೋಸ್ಟಾ ರಿಕಾದ ಸ್ಯಾನ್ ಜೋಸ್‌ನಲ್ಲಿ ಕೋಸ್ಟಾ ರಿಕಾ ಅಧ್ಯಕ್ಷ ರೋಡ್ರಿಗೋ ಚೇವ್‌ ಅವರೊಂದಿಗೆ ಯುಎಸ್ ಸ್ಟೇಟ್ ಸೆಕ್ರೆಟರಿ ಮಾರ್ಕೊ ರೂಬಿಯೊ ಅವರುಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ಕೋಸ್ಟರಿಕನ್ ಅಧ್ಯಕ್ಷರ ಕಚೇರಿಯು ಹೊರಡಿಸಿದ ಹೇಳಿಕೆಯು ಗಡೀಪಾರು ಮಾಡಿದ ವಲಸಿಗರನ್ನು ಕರೆಸಿಕೊಳ್ಳುತ್ತಿರುವ ಪನಾಮ ಮತ್ತು ಗ್ವಾಟೆಮಾಲಾ ನಂತರ ಮಧ್ಯ ಅಮೆರಿಕಾದಲ್ಲಿ ಮೂರನೇ ರಾಷ್ಟ್ರ ನಮ್ಮದಾಗಿದೆ ಎಂದಿದೆ.

ಅಮೆರಿಕದಿಂದ ಕಳುಹಿಸಲಾದ ವಲಸಿಗರು ತಮ್ಮ ದೇಶಗಳಿಗೆ ವಾಪಸ್ ಕಳುಹಿಸುವವರೆಗೆ ಕೋಸ್ಟರಿಕಾದಲ್ಲಿಯೇ ಇರುತ್ತಾರೆ ಎಂದು ಹೇಳಿಕೆ ತಿಳಿಸಿದೆ. ಈ ವಿಷಯದ ಕುರಿತು ಪ್ರತಿಕ್ರಿಯೆಗಾಗಿ ಮಾಡಿದ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕೋಸ್ಟರಿಕಾಕ್ಕೆ ಕಳುಹಿಸಲಾಗುತ್ತಿರುವ ಭಾರತೀಯರ ಸಂಖ್ಯೆ ಅಥವಾ ಅವರ ರಾಷ್ಟ್ರೀಯತೆಯನ್ನು ದೃಢೀಕರಿಸಲಾಗಿದೆಯೇ ಎಂಬುದನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಲಿಲ್ಲ.

RELATED ARTICLES

Latest News