Tuesday, February 25, 2025
Homeರಾಷ್ಟ್ರೀಯ | Nationalಅಯೋಧ್ಯೆಯಲ್ಲಿ ಹಾರಾಡುತ್ತಿದ್ದ ಅಪರಿಚಿತ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು

ಅಯೋಧ್ಯೆಯಲ್ಲಿ ಹಾರಾಡುತ್ತಿದ್ದ ಅಪರಿಚಿತ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು

Unidentified Drone Over Ayodhya Ram Temple Shot Down By Police, FIR Registered

ಅಯೋಧ್ಯೆ (ಉತ್ತರಪ್ರದೇಶ), ಫೆ.18- ಆಯೋಧ್ಯೆಯ ಶ್ರೀ ರಾಮ ಮಂದಿರದ ಬಳಿ ಹಾರಾಟ ನಡೆಸುತ್ತಿದ್ದ ಅಪರಿಚಿತ ಡೋಣ್ ಕ್ಯಾಮೆರಾವನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಯೋಧ್ಯೆ ದೇವಸ್ಥಾನದ ರಾಮ ಜನ್ಮಭೂಮಿ ಸಂಕೀರ್ಣದ ದರ್ಶನ ಮಾರ್ಗದಲ್ಲಿ ಡೋನ್ ಅನ್ನು ಹಾರಿಸಲಾಗುತ್ತಿದೆ ರಾಮಮಂದಿರದ ಆ್ಯಂಟಿ ಡೋನ್ ವ್ಯವಸ್ಥೆಯು ದರ್ಶನ್ ಮಾರ್ಗದಲ್ಲಿ ಕ್ಯಾಮರಾ ಹಾರಿಸುವುದನ್ನು ಗಮನಿಸಿದ ನಂತರ ಅದನ್ನು ಶೂಟ್ ಮಾಡಿದೆ.

ಡೋನ್ ಹಾರಾಟಕ್ಕೆ ಕಾರಣವಾದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಬಾಂಬ್ ನಿಷ್ಕ್ರಿಯ ದಳವೂ ಕ್ಯಾಮೆರಾವನ್ನು ಕೂಲಂಕುಷವಾಗಿ ಪರಿಶೀಲಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಈಗ ರಾಮಲಲ್ಲಾ ದರ್ಶನಕ್ಕಾಗಿ ಅಯೋಧ್ಯೆ ಮತ್ತು ವಾರಣಾಸಿ ಕಡೆಗೆ ತೆರಳುತ್ತಿದ್ದು, ಇಡೀ ನಗರ ಭಕ್ತರಿಂದ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಅಯೋಧ್ಯೆಯಲ್ಲಿ ಭಕ್ತರ ಅಭೂತಪೂರ್ವ ಉಲ್ಬಣವನ್ನು ನಿಭಾಯಿಸಲು ಆಡಳಿತವು ಬ್ಯಾರಿಕೇಡ್‌ಗಳನ್ನು ಸ್ಥಾಪಿಸುವುದು ಸೇರಿದಂತೆ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಸಂಖ್ಯೆಯಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ.

ಅಯೋಧ್ಯೆ ಎಸ್ಪಿ ಮಧುವನ್ ಕುಮಾರ್‌ಸಿಂಗ್ ಮಾತನಾಡಿ, ನಡೆಯುತ್ತಿರುವ ಮಹಾಕುಂಭದ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ನಗರವನ್ನು ಆರು ವಲಯಗಳು ಮತ್ತು 11 ವಲಯಗಳಾಗಿ ವಿಂಗಡಿಸಲಾಗಿದೆ. ಸರಯೂ ನದಿಯಲ್ಲಿ ಸ್ನಾನ ಮಾಡಲು ಮತ್ತು ದರ್ಶನ ಪಡೆಯಲು ಬೆಳಗ್ಗೆಯಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

Latest News