ಬೆಂಗಳೂರು, ಫೆ.18-ಕೆಪಿಎಸ್‌ಇ ಪರೀಕ್ಷೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲೇಬೇಕು, ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ಅಧ್ಯಕ್ಷ ಟಿ.ಎನ್.ನಾರಾಯಣ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರೀಡಂ ಪಾರ್ಕ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಹಾಗು ಕಾರ್ಯಕರ್ತರ ಜೊತೆ ಕೆಪಿಎಸ್‌ಇ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ಈ ಹಿಂದೆ ಮರುಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿದಾಗ ವಿದ್ಯಾರ್ಥಿಗಳು ಸಂತಸ ಪಟ್ಟಿದ್ರು, ಆದ್ರೆ ಅದು ವಿದ್ಯಾರ್ಥಿಗಳ ಪಾಲಿಗೆ ಉಳಿದಿಲ್ಲ.ಈ ನೆಲದ ಲಕ್ಷಾಂತರ ಯುವಕರ ಬದುಕಿನ ಮೇಲೆ ಭ್ರಷ್ಟ ಅಧಿಕಾರಿಗಳು ಸಮಾಧಿ ಕಟ್ಟೋಕ್ಕೆ ನಿಂತರು. ರಾಜ ವ್ಯಾಪಾರಿ ಆಗಿದ್ದಾರಾ…? ಹಾಗಾಗಿ ಪ್ರಜೆಗಳು ಬಿಕಾರಿ ಆಗಿದ್ದಾರೆ ಎಂದು ಟೀಕಿಸಿ ಇದು ನಮ್ಮ ನಾಡು, ನಮ್ಮ ಜನ, ನಮ್ಮವರ ಮೇಲೆ ದಬ್ಬಾಳಿಕೆ ಮಾಡಿದ್ರೆ ಕರವೇ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ ತಪ್ಪು ಮಾಡಿರುವ ಅಧಿಕಾರಿ ಮೊದಲು ಜೈಲಿಗೆ ಕಳುಹಿಸಬೇಕು, ಬ್ರಷ್ಟಾಚಾರ ಇಂದು ಅಂತ್ಯ ಆಗಬೇಕು. ಕುಂಬಾರನಿಗೆ ಒಂದು ದಿವಸ ದೊಣ್ಣೆಗೆ ಒಂದೇ ನಿಮಿಷ, ಇದಕ್ಕೆ ಅವಕಾಶ ಕೊಡಬೇಡಿ ಎಂದು ಸರ್ಕಾವನ್ನು ಒತ್ತಾಯಿಸಿದರು.
ಕರ್ನಾಟಕ ಮುಖ್ಯಮಂತ್ರಿಗಳ ಕೈಯಲ್ಲಿ ಮಕ್ಕಳ ಭವಿಷ್ಯದ ಮುನ್ನುಡಿ ಇದೆ, ಮುಖ್ಯಮಂತ್ರಿ ಮುನ್ನುಡಿ ಬರೆದ್ರೆ, ವಿದ್ಯಾರ್ಥಿಗಳು ಮುಂದೊಂದು ದಿನ ನಿಮಗೆ ಬೆನ್ನುಡಿ ಬರಿತ್ತಾರೆ. ವಿದ್ಯಾರ್ಥಿಗಳು ಬದುಕು ಭವಿಷ್ಯ ಇದರಲ್ಲಿ ಅಡಗಿದೆ,
ಕೋಟಿ ಕೋಟಿ ತೆಗೆದುಕೊಳ್ಳೋದಕ್ಕೆ ಈ ಮಕ್ಕಳನ್ನ ಆಚೆ ಇಟ್ಟಿದ್ದೀರಾ…? ಇದು ಒಂದು ದಿನದ ಹೋರಾಟ ಅಲ್ಲಾ, ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲೋದಿಲ್ಲ…
ಕರ್ನಾಟಕದ ಮಕ್ಕಳು ಬೀದಿಗಿಳಿದರೆ, ವಿಧಾನಸೌಧದಲ್ಲಿ ಕೂತ ಜಾಣ ಕಿವುಡರಿಗೆ ಮುಟ್ಟುತ್ತೆ ಎಂದರು.
ಫಲಿತಾಂಶ ಪ್ರಕಟ ಮಾಡಬಾರದು ಮತ್ತು ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆ ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಭಾಗಿದ್ದರು ನಟಿ ಆಶ್ವಿನಿ, ಮತ್ತು ಸುನಾಮಿ ಕಿಟ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.