Monday, February 24, 2025
Homeಜಿಲ್ಲಾ ಸುದ್ದಿಗಳು | District Newsದಕ್ಷಿಣ ಕನ್ನಡ | Dakshina Kannada8 ಲಕ್ಷ ರೂ. ಹಣ ತಿಂದು ಹಾಕಿದ ಗೆದ್ದಲು ಹುಳುಗಳು

8 ಲಕ್ಷ ರೂ. ಹಣ ತಿಂದು ಹಾಕಿದ ಗೆದ್ದಲು ಹುಳುಗಳು

Termites eat Rs 8 lakh in cash

ಮಂಗಳೂರು/ಬೆಂಗಳೂರು, ಫೆ.19-ಮಂಗಳೂರಿನ ಕೆನರಾ ಬ್ಯಾಂಕ್ ಶಾಖೆಯೊಂದರ ಲಾಕರ್‌ನಲ್ಲಿ ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲು ಹಿಡಿದು ಪುಡಿಯಾದ ಘಟನೆ ವರದಿಯಾಗಿದೆ.
ಈ ಬಗ್ಗೆ ಸಫಲ್‌ ಎಂಬುವವರು ಬೆಂಗಳೂರಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಗೆ ಬಂದು ದೂರು ನೀಡಿದ್ದಾರೆ.

ಮಂಗಳೂರಿನ ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಬ್ಯಾಂಕ್‌ಗೆ ಬಂದಿದ್ದಾರೆ ಅಧಿಕಾರಿಗಳು ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ.

ಲಾಕರ್ ಒಳಗೆ ನೋಡಿದರೆ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದ ದುಡ್ಡು ಸಂಪೂರ್ಣವಾಗಿ ಕಪ್ಪಾಗಿತ್ತು ಏನಿದು ಎಂದು ತೆಗೆದು ನೋಡಿದರೆ ಗೆದ್ದಲು ಹಿಡಿದು ನೋಟುಗಳು ಚೂರಾಗಿ ಬಿದ್ದಿದೆ. ಎಲ್ಲಾ ನೊಇಟುಗಳು ಇದೇ ರೀತಿ ಆಗಿದೆ.

ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ,

ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕರ್‌ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್ ಎಂಬ ನಂಬಿಕೆಯಿಂದ ಹೀಗಾಗಿದೆ ಎಂದು ಸಫಲ್ ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News