ನ್ಯೂಯಾರ್ಕ್/ಫ್ಲೋರಿಡಾ, ಫೆ.19- ನಾವು ಭಾರತಕ್ಕೆ 21 ಮಿಲಿಯನ್ ಡಾಲರ್ ಏಕೆ ನೀಡುತ್ತಿದ್ದೇವೆ? ಅವರಿಗೆ ಅಲ್ಲಿ ಬಹಳಷ್ಟು ಹಣವಿದೆ, ನಮ್ಮ ವಿಷಯದಲ್ಲಿ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬಿಲಿಯನೇರ್ ಸ್ಪೇಸ್ ಎಕ್ಸ್ =ಸಿಇಒ ಮಸ್ಕ್ ನೇತೃತ್ವದ ಸರ್ಕಾರಿ ದಕ್ಷತೆ ಇಲಾಖೆ, ಅಮೆರಿಕ ತೆರಿಗೆದಾರರ ಡಾಲರ್‌ಗಳನ್ನು ಖರ್ಚು ಮಾಡಲಿರುವ ವಸ್ತುಗಳನ್ನು
ಪಟ್ಟಿ ಮಾಡಿ ಅದರಲ್ಲಿ ಭಾರತದಲ್ಲಿ ಮತದಾನಕ್ಕಾಗಿ ನಿಧಿ ನೀಡಿದ್ದನ್ನು ಪ್ರಸ್ತಾಪಿಸಿ ಸಂಚಲನ ಸೃಷ್ಟಿಸಿದ್ದರು.
ಅವರ ಸುಂಕಗಳು ನಮಗೆ ತುಂಬಾ ಹೆಚ್ಚಿರುವುದರಿಂದ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿರುವ ಟ್ರಂಪ್ ಭಾರತಕ್ಕೆ ನಿಧಿ ನೀಡುವ ಉದ್ದೇಶವನ್ನು ಪ್ರಶ್ನಿಸಿದರು.
ಭಾರತವು ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ, ಬಾಂಗ್ಲಾದೇಶ ಸೇರಿ ಹಲವು ದೇಶಕ್ಕೆ ನೀಡುವ ನಿಧಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಅಧ್ಯಕ್ಷರು ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದು ಇದರಲ್ಲಿ ಫೆಡರಲ್ ಸರ್ಕಾರವು ತೆರಿಗೆದಾರರ ಡಾಲರ್‌ಗಳನ್ನು ವ್ಯರ್ಥವಾಗಿ ಖರ್ಚು ಮಾಡದಿರುವ ಹಾಗು ಆಮೂಲಾಗ್ರ ಪಾರದರ್ಶಕತೆ ಅಗತ್ಯವಿರುವ ಜ್ಞಾಪಕ ಪತ್ರವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಂಪ್ ಅವರು ಭಾರತದ ಬಗ್ಗೆ ಸಾಕಷ್ಟು ಗೌರವ ಹೊಂದಿದ್ದಾರೆ. ನನಗೆ ಪ್ರಧಾನಿಯ ಬಗ್ಗೆ ಸಾಕಷ್ಟು ಗೌರವವಿದೆ ಎಂದು ಮಸ್ಕ್ ಹೇಳಿದರು.ಪ್ರಸ್ತತ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಿದ್ದಾಗ ವಿದೇಶಿ ವ್ಯಾಪಾರ ಪಾಲುದಾರರಿಗೆ ಸಂಬಂಧಿಸಿದಂತೆ ಪರಸ್ಪರ ಸುಂಕಕ್ಕೆ ಸಮಾನವಾದ ದರವನ್ನು ನಿರ್ಧರಿಸುವ ಕುರಿತು ಒಡಂಬಡಿಕೆ ಆಗಿದೆ ಎಂದಿದ್ದಾರೆ