Monday, February 24, 2025
Homeಅಂತಾರಾಷ್ಟ್ರೀಯ | Internationalಭಯೋತ್ಪಾದನೆ ವಿರುದ್ಧ ಪಾಕ್ ಹೋರಾಡುತ್ತೆ ಎಂಬುದು ವ್ಯಂಗ್ಯದ ಪರಾಕಷ್ಟೆ : ಪರ್ವತೇನಿ

ಭಯೋತ್ಪಾದನೆ ವಿರುದ್ಧ ಪಾಕ್ ಹೋರಾಡುತ್ತೆ ಎಂಬುದು ವ್ಯಂಗ್ಯದ ಪರಾಕಷ್ಟೆ : ಪರ್ವತೇನಿ

Indian envoy to UN condemns Pakistan, says Jammu and Kashmir will always be integral part of India

ವಿಶ್ವಸಂಸ್ಥೆ,ಫೆ.17– ಭಾರತವು ಪಾಕ್ ಪ್ರಾಯೋಜಿತ ಜೈಷ್-ಎ-ಮೊಹಮ್ಮದ್ನಂತಹರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕ ಕೃತ್ಯಗಳ ಬಲಿಪಶುವಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಾರತದ ಪ್ರತಿನಿಧಿ ಪರ್ವತೇನಿ ಹರೀಶ್ ಹೇಳಿದ್ದಾರೆ.

ಚೀನಾದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತಾನು ಭಯೋತ್ಪಾದನೆ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವುದು ವ್ಯಂಗ್ಯದ ಪರಾಕಷ್ಟೆ ಎಂದು ಟೀಕಿಸಿದ್ದಾರೆ.

ಆಭಿವೈವಿಧ್ಯದ ಆಚರಣೆ, ಸುಧಾರಣೆ ಮತ್ತು ಜಾಗತಿಕ ಆಡಳಿತದ ಉತ್ತಮಿತೆಬಿ ವಿಚಾರ ಕುರಿತ ಸಭೆಯಲ್ಲಿ ಪಾಕಿಸ್ತಾನದ ಉಪಪ್ರಧಾನಿ, ಪ್ರಸ್ತಾಪಿಸಿದಸಕ್ಕೆ ಹರೀಶ್ ಈ ಮಾರುತ್ತರ ನೀಡಿದರು.
ಪಾಕಿಸ್ತಾನವು ಭಯೋತ್ಪಾದನೆ ಮತ್ತು ಉಗ್ರವಾದದ ಜಾಗತಿಕ ಕೇಂದ್ರವಾಗಿದೆ. ತನ್ನ ನೆಲದಲ್ಲಿ ವಿಶ್ವಸಂಸ್ಥೆ ಪಟ್ಟಿ ಮಾಡಿರುವ 20ಕ್ಕೂ ಅಧಿಕ ಉಗ್ರ ಸಂಘಟನೆಗಳಿಗೆ
ಆಶ್ರಯ ನೀಡಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಸರ್ಕಾರದ ಬೆಂಬಲ ನೀಡುತ್ತಿದೆ ಎಂದು ಹರೀಶ್ ದೂಷಿಸಿದರು.

ಈ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವಿಶ್ವಸಂಸ್ಥೆಗೆ ಭಾರತ ಮತ್ತು ಮಿತ್ರರಾಷ್ಟ್ರಗಳು ಸಲ್ಲಿಸಿದ ಪ್ರಸ್ತಾವನೆಗಳಿಗೆ ಪಾಕ್‌ನ ಆಪ್ತಮಿತ್ರ ಚೀನಾ ತಡೆವೊಡ್ಡುತ್ತಲೇ ಬಂದಿತ್ತು. ಯಾವುದೇ ಭಯೋತ್ಪಾದನೆಯು ಅದರ ಸ್ವರೂಪ, ವಿಧಾನ ಮತ್ತು ಉದ್ದೇಶ ಏನೇ ಇದ್ದರೂ ಸಮರ್ಥನೀಯವಲ್ಲ ಎಂದು ಹರೀಶ್ ಪ್ರತಿಪಾದಿಸಿದರು.

RELATED ARTICLES

Latest News