ನಾಗ್ಪುರ , ಫೆ.20-ಸುಮಾರು ವಿಮಾನವು396 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳೊಂದಿಗೆ ಢಾಕಾದಿಂದ ದುಬೈಗೆ ಹೊರಟಿದ್ದ ಬಿಮನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನವು ಮಹಾರಾಷ್ಟ್ರದ ನಾಗುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತಾಂತ್ರಿಕ ಸಮಸ್ಯೆಗಳಿಂದಾಗಿ ಮಧ್ಯರಾತ್ರಿಯ ಸುಮಾರಿಗೆ ವಿಮಾನ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ನಾಗುರ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನದಲ್ಲಿ 396 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು ಎಲ್ಲರೂ ಸುರಕ್ಷಿತವಾಗಿದ್ದು, ವಿಮಾನದ ತಾಂತ್ರಿಕ ಸಮಸ್ಯೆ ನಂತರ ಬೆಳಿಗ್ಗೆ ಪ್ರಯಾಣ ಆರಂಭಿಸಿದೆ ಎಂದು ಹೇಳಿದರು.