ಬೆಂಗಳೂರು, ಫೆ.20-ರಾಜ್ಯ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.ಮಾ. 22ರಿಂದ ಮಾ.25ರವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಕಿರಿಯ ಕಾನೋಲ್ ಆಪರೇಟರ್, ಕಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಮಾ.22ರಂದು, ಸಹಾಯಕ, ಕಿರಿಯ ಸಹಾಯಕ, ಕಂಪ್ಯೂಟರ್ ಆಪರೇಟರ್ ಮತ್ತು ಕಿರಿಯ ಕಾನೋಲ್ ಆಪರೇಟರ್ ಹುದ್ದೆಗಳಿಗೆ ಮಾ.23ರಂದು, ಹಿರಿಯ ಪ್ರೊಗ್ರಾಮರ್ ಮತ್ತು ಕಿರಿಯ ಪ್ರೊಗ್ರಾಮರ್ ಹುದ್ದೆಗಳಿಗೆ ಮಾರ್ಚ್ 24ರಂದು ಮತ್ತು ಡಾಟಾ ಎಂಟ್ರಿ ಸಹಾಯಕ ಹುದ್ದೆಗೆ ಮಾ.25ರಂದು ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.