ಇಟಾವಾ, (ಯುಪಿ)ಫೆ 21-ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವವ ಘಟನೆ ಕಳೆದ ರಾತ್ರಿ ರುದ್ರಾಪುರ ಗ್ರಾಮದ ಉಸ್ರಾಹರ್ ಸರಸಾಯಿ ನವರ್ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಆಶಿಶ್ (17), ಹಿಮಾಂಶು (15), ರಾಹುಲ್ (22), ಪ್ರಾಂಶು (15) ಮತ್ತು ರೋಹಿತ್ (18) ಎಂದು ಗುರುತಿಸಲಾಗಿದ್ದು,ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಉಸ್ರಾಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ದೌಲತ್‌ಪುರ ಗ್ರಾಮದ ಐವರು ಉಸ್ರಾಹರ್ ಪಟ್ಟಣದ ಬಳಿಯ ಅತಿಥಿ ಗೃಹದಲ್ಲಿ ಮದುವೆಯ ಆರತಕ್ಷತೆಯಲ್ಲಿ ಪಾಲ್ಗೊಂಡು ಮೋಟಾರ್‌ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದರು. ರುದ್ರಾಪುರ ಗ್ರಾಮದ ಬಳಿ, ಅಪರಿಚಿತ ವಾಹನ ಅವರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದು ಐವರನ್ನು ರಸ್ತೆಗೆ ಉರಳಿ ಬಿದ್ದು ತೀವ್ರವಾಗಿ ಗಾಯಗೊಂಡರು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ ತಿಳಿಸಿದ್ದಾರೆ..
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಶಿಶ್ ಮೃತಪಟ್ಟರೆ, ಹಿಮಾಂಶು, ರಾಹುಲ್ ಮತ್ತು ರೋಹಿತ್ ಸೈಫಾಯಿ ಮಾರ್ಗದಲ್ಲಿ ಸಾವನ್ನಪ್ಪಿದರು. ಪ್ರಾಂಶು ಎಂಬಾತ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.
ಸಂಬಾರಿ ನಿಯಮ ಪಾಲಿಸದೆ ಈ ಐವರು ದ್ವಿಚಕ್ರ ಹೋಗುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ವಾಹನವನ್ನು ಅಪಘಾತವೆಸಗಿದ ವಾಹನ ಚಾಲಕನ ಪತ್ತೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.