ಮುಂಬೈ, ಫೆ. 22: ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರವಾಲ್ ಉತ್ತಮ ಕೆಲಸ ಮಾಡುತ್ತಿದ್ದರು. ಆದರೆ ಅವರು ಮದ್ಯದಂಗಡಿಗಳನ್ನು ತೆರೆಯಲು ಪ್ರಾರಂಭಿಸಿದರು ಮತ್ತು ಅದರ ಪರಿಣಾಮವಾಗಿ ಜನರ ಕೋಪವನ್ನು ಎದುರಿಸಬೇಕಾಯಿತು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.
ರೇಖಾ ಗುಪ್ತಾ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯ ಹೊಸ ಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅವರ ಶುದ್ಧ ಆಲೋಚನೆಗಳು ಮತ್ತು ಕಾರ್ಯಗಳಿಂದಾಗಿ ಜನರು ಅವರಿಗೆ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ, ಕೇಬ್ರಿವಾಲ್ ಸಮಾಜಕ್ಕೆ ಮಾದರಿಯಾಗಬೇಕಿತ್ತು ಆದರೆ ದಾರಿ ತಪ್ಪಿದರು ಎಂದು ಆಮ್ ಆದ್ಮ ಪಕ್ಷದ ಹುಟ್ಟಿಗೆ ಕಾರಣವಾದ ಹಜಾರೆ ಅಭಿಪ್ರಾಯಪಟ್ಟರು. ಹಿಂದಿನ ಸಿಎಂ (ಕೇಜಿವಾಲ್) ಉತ್ತಮ ಕೆಲಸ ಮಾಡುತ್ತಿದ್ದರು ಮತ್ತು ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾದರು.
ಅವರು ಉತ್ತಮ ಕೆಲಸ ಮಾಡುತ್ತಿದ್ದರಿಂದ ನಾನು (ಅವರ ವಿರುದ್ಧ) ಏನನ್ನೂ ಮಾತನಾಡಲಿಲ್ಲ. ಆದರೆ ನಂತರ, ಅವರು ನಿಧಾನವಾಗಿ ಮದ್ಯದಂಗಡಿಗಳನ್ನು ತೆರೆಯಲು ಮತ್ತು ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದರು. ನಂತರ ನಾನು ಅಸಮಾಧಾನಗೊಂಡೆ ಎಂದು ಎಎಪಿ ಸರ್ಕಾರದ ವಿವಾದಾತ್ಮಕ ಅಬಕಾರಿ ನೀತಿಯನ್ನು ಉಲ್ಲೇಖಿಸಿ ಹಜಾರೆ ಸುದ್ದಿಗಾರರಿಗೆ ತಿಳಿಸಿದರು.