ಬೆಂಗಳೂರು: ಫ್ಯಾಸಿಟಿಸ್ ಎಂಬ ಮಾಂಸ ತಿನ್ನುವ ಸೋಂಕಿನಿಂದ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದ 50 ವರ್ಷದ ಪೊಲೀಸ್ ಅಧಿಕಾರಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ , ಸರ್ಜಿಕಲ್ ಗ್ಯಾಸ್ಟ್ರೋಲಾಜಿ ಹಿರಿಯ ಸಲಹೆಗಾರ ಡಾ. ಸಂತೋಷ್ ಎಂ.ಪಿ, ಅವರ ತಂಡ ಈ ಯಶಸ್ವಿ ಚಿಕಿತ್ಸೆಯನ್ನು ನಡೆಸಿದೆ. ಈ ಕುರಿತು ಮಾತನಾಡಿದ ಡಾ. ಸಂತೋಷ್,
50 ವರ್ಷದ ರವಿ (ಹೆಸರು ಬದಲಾಗಿದೆ) ಎಂಬ ಪೊಲೀಸ್ ಅಧಿಕಾರಿಯು ತೀವ್ರ ಕಾಲಿನ ಊತದಿಂದ ಬಳಲುತ್ತಿದ್ದರು, ಇದರ ಜೊತೆಗೆ, ಅತಿಯಾದ ನೋವು ಜ್ವರವನ್ನು ಹೊಂದಿದ್ದರು.
ಈ ಹಿಂದೆಯೇ ಅವರು ಹೃದಯ ಸಮಸ್ಯೆ ಹೊಂದಿದ್ದ ಇವರಿಗೆ ಮಧಮೇಹದ ಇತಿಹಾಸವೂ ಇತ್ತು. ಹೃದಯ ಕಾಯಿಲೆಗಾಗಿ ಅನೇಕ ಚಿಕಿತ್ಸೆಗೆ ಒಳಗಾಗಿದ್ದ ಅವರ ಸ್ಥಿತಿ, ಈ ಕಾಲಿನ ಊತ ಹಾಗೂ ಸೋಂಕಿನಿಂದ ಹದಗೆಡುತ್ತಾ ಬರುತ್ತಿತ್ತು. ಅವರ ಕೀಲುಗಳು ಮತ್ತು ಮೂಳೆಗಳಿಗೂ ಈ ಸೋಂಕು ಹರಡಿತು. ಅವರ ಪೊಲೀಸ್ ವೃತ್ತಿಯಲ್ಲಿ ಕಾಲು ಅತಿ ಅವಶ್ಯಕವಾದ್ದರಿಂದ ಎಚ್ಚತ್ತೆಕೊಂಡ ಅವರು, ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು.
ರವಿ ಅವರಿಗೆ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಮೂಲಕ ಸಂಕೀರ್ಣವಾದ ಮಧುಮೇಹದ ಪಾದದಿಂದ ಬಳಲುತ್ತಿರುವುದು ಗಮನಕ್ಕೆ ಬಂತು.ಇದು ಜೀವಕ್ಕೆ ಅಪಾಯಕಾರಿ ಸೋಂಕಾಗಿದ್ದು, ಮೃದು ಅಂಗಾಂಶಗಳನ್ನು ವೇಗವಾಗಿ ಹಾನಿಗೊಳಿಸುತ್ತದೆ, ಅಷ್ಟೇ ಅಲ್ಲದೆ, ಮೂಳೆಗಳಿಗೂ ಹರಡುತ್ತದೆ. ಹೀಗಾಗಿ ಅವರಿಗೆ ಕೂಡಲೇ. ಪ್ರತಿಜೀವಕಗಳು ಮತ್ತು ವ್ಯಾಕ್ಯೂಮ್ ಅಸಿಸ್ಟೆಡ್ ಕ್ಲೋಸರ್ (ವಿಎಸಿ) ಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಈ ವಿಧಾನದ ನೂತನವಾಗಿದ್ದು, ಸೋಂಕನ್ನು ನಿಯಂತ್ರಿಸಿ, ವೇಗವಾಗಿ ಗುಣಪಡಿಸಲು ಸಹಕರಿಸುತ್ತದೆ.

ಒಂದು ತಿಂಗಳ ಅವಧಿಯಲ್ಲಿ, ರವಿ ಅವರಿಗೆ ಮೂರು ಶಸ್ತ್ರಚಿಕಿತ್ಸೆ ನಡೆಸಿ, ಪ್ರತಿಯೊಂದೂ ಸೋಂಕನ್ನೂ ತೆಗೆದುಹಾಕುವ ಕ್ರಿಯೆ ನಡೆಸಲಾಯಿತು. ಅವರ ಅಂತಿಮ ಶಸ್ತ್ರಚಿಕಿತ್ಸೆಯ ನಂತರ, ರವಿಯ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಿದರು.