ಬೆಂಗಳೂರು, ಫೆ.22- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಪ್ರೇಕ್ಷಕರ ಮನ ಕದ್ದಿದ್ದಾರೆ. ಆದರೆ ಈಗ ಮೈದಾನದ ಹೊರಗೂ ಸಾಕಷ್ಟು ಸದ್ದು ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಿಸ್ಟರ್ ನಾಗ್ (ಡ್ಯಾನಿಶ್ ಶೇರ್ ) ರೊಂದಿಗೆ ನಡೆಸಿದ ಸಂವಾದದಲ್ಲಿ ಪೆರ್ರಿ ಅವರು ಕೇಜಿಸ್ಟಾರ್ ರವಿಚಂದ್ರನ್ ಹಾಗೂ ಜೂಹಿಚಾವ್ಹಾನಟಿಸಿದ್ದ ಪ್ರೇಮಲೋಕದ ಸಿನಿಮಾದ ಗೀತೆಯೊಂದನ್ನು ಹಾಡುವ ಮೂಲಕ ತಮಗೆ ಕನ್ನಡದ ಬಗ್ಗೆ ಇರುವ ಅಪಾರ ಪ್ರೇಮವನ್ನು ಮೆರೆದಿದ್ದಾರೆ.
ಎಲಿಸ್ ಪೆರ್ರಿ ಅವರು ಆಡಿರುವ ಕನ್ನಡದ ಗೀತೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು ಅದಕ್ಕೆ ಸಾಕಷ್ಟು ಮೆಚ್ಚುಗೆ ಹರಿದು ಬಂದಿದೆ.
ಪ್ರೇಮಲೋಕ ಸಿನಿಮಾದ ಜಹಲೋ ಮೈ ಲಕ್ಷ್ಮಿ ಲೇಡಿ ಯು ಆರ್ ಯು ಯು ಆರ್ ಯು ? ಕನ್ನಡ ಬರೋದಿಲ್ವಾ, ಕನ್ನೆರೆಡು ಕಣ್ಣಲ್ವಾ? ಕನ್ನಡಕದೊಳಗಿಂದ ಕಾಣುತ್ತಿದೆ ಈ ಅಂದ ! ಹೌದೆನೋ ಮನ್ಮಥ, ಬಾಯಿಮುಕ್ಕೊಂಡು ಹೋಗತ್ತಾ?ಬಿ ಎಂಬ ಗೀತೆಯನ್ನು ಹಾಡುವ ಮೂಲಕ ಪೆರ್ರಿ ಕನ್ನಡಿಗರ ದಿಲ್ ಕದ್ದಿದ್ದಾರೆ. 2024ರಲ್ಲಿ ಚೊಚ್ಚಲ ಬಾರಿ ಡಬ್ಲ್ಯುಪಿಎಲ್ ಚಾಂಪಿಯನ್ಸ್ ಆದ ಬೆನ್ನಲ್ಲೇ ಎಲ್ಲೀಸ್ ಪೆರಿ ಅವರು ಕರಾಟೆ ಕಿಂಗ್ ಶಂಕರ್ ನಾಗ್ ನಟಿಸಿ, ನಿರ್ದೇಶಿಸಿದ್ದ ಗೀತಾ ಸಿನಿಮಾದ ಸಂತೋಷಕ್ಕೆ ಹಾಡು ಸಂತೋಷಕ್ಕೆ ಗೀತೆಗೆ ತಂಡದ ಇತರ ಆಟಗಾರ್ತಿಯರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಕನ್ನಡಿಗ ಮನರಂಜಿಸಿದ್ದರು.
ಆರ್ ಸಿಬಿಗೆ ಸೋಲು:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಎಲ್ಲೀಸ್ ಪೆರಿ ಸ್ಫೋಟಕ 81 ರನ್ ಗಳಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ ಸ್ಮೃತಿ ಮಂಧನಾ ಪಡೆಯು 4 ವಿಕೆಟ್ ಗಳಿಂದ ಸೋಲು ಕಂಡಿದೆ. ಇದು ಪ್ರಸಕ್ತ ಸರಣಿಯಲ್ಲಿ ಆರ್ ಸಿಬಿ ಕಂಡ ಮೊದಲ ಸೋಲಾಗಿದೆ.