ದುಬೈ, ಫೆ 22– ಚಾಂಪಿಯನ್ಸ್ ಟ್ರೋಫಿ ನಿಮಿತ್ತ ನಾಳೆ ನಡೆಯಲಿರುವ ಹೈವೋಲ್ವೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ಧ ಗೆಲುವು ಸಾಧಿಸುವುದನ್ನು ನೋಡಲು ಬಯಸುತ್ತೇನೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಆತುಲ್ ವಾಸನ್ ಅವರು ಹೇಳಿದ್ದಾರೆ.
ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವಾಸನ್ ಅವರು, ಅಚಾಂಪಿಯನ್ಸ್ ಟ್ರೋಫಿಯ ರೋಚಕತೆ ಉಳಿಯಬೇಕಾದರೆ ನಾಳಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಗೆಲುವು ಸಾಧಿಸಲಿ ಎಂದು ನಾನು ಆಶಿಸುತ್ತೇನೆ. ಒಂದು ವೇಳೆ ನಾಲಿನ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಿದರೆ ಆಗ ನಿಜವಾದ ಪೈಪೋಟಿ ಇರುತ್ತದೆ ಎಂದು ತಿಳಿಸಿದ್ದಾರೆ.
ಅಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಲ್ಲಿ ವಿಲನ್ ಗಳಿಗೆ ಪಂಚ್ ಕೊಡುವ ರೀತಿ ಇರುತ್ತದೆ. ವಿಲನ್ ಗಳು ಯಾವುದೇ ಹಂತದಲ್ಲೂ ಬಿಗ್ ಬಿ ಗೆ ಪಂಚ್ ನೀಡುವುದನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗುವುದೇ ಇಲ್ಲ.
ಅದೇ ರೀತಿ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧಗೆಲುವು ಸಾಧಿಸುತ್ತಲೇ ಬಂದಿದೆ. ಆದರೆ ನಾಳಿನ ಪಂದ್ಯದಲ್ಲಿ ಪಾಕ್ ತಂಡವು ಸ್ಪರ್ಧಾತ್ಮಕ ಹೋರಾಟ ತೋರುವ ಮೂಲಕ ಗೆಲುವು ಸಾಧಿಸಲಿದೆ’ ಎಂದು ಅತುಲ್ ವಾಸನ್ ಭವಿಷ್ಯ ನುಡಿದಿದ್ದಾರೆ.
ಅ2000ರ ವರ್ಷದ ನಂತರ ಪಾಕಿಸ್ತಾನದಲ್ಲಿ ಉಂಟಾದ ರಾಜಕೀಯ ಬದಲಾವಣೆಗಳಿಂದ ಆ ತಂಡವು ಬಲಿಶವಾಗಿದೆ. ಆದರೆ ಇದೇ ವೇಳೆ ಭಾರತ ತಂಡವು ವಿಶ್ವದ ಬಲಿಷ್ಠ ತಂಡವಾಗಿ ಬೆಳೆದಿದೆ ಎಂದು ವಾಸನ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ದ ಪ್ರಾಬಲ್ಯ ಮೆರೆದಿದದು 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ 2023ರ ಏಕದಿನ ಹಾಗೂ 2024ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಪಡೆ ಗೆಲುವು ಸಾಧಿಸಿರುವುದರಿಂದ ನಾಳಿನ ಪಂದ್ಯವು ರೋಚಕತೆ ಸೃಷ್ಟಿಸಿದೆ.
ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದು, ಟೂರ್ನಿಯಲ್ಲಿ ಉಳಿಯಬೇಕಾದರೆ ಭಾರತವನ್ನು ಮಣಿಸುವ ಒತ್ತಡಕ್ಕೆ ಸಿಲುಕಿದೆ.