ಅಲ್ಬುಕರ್ಕ್,ಫೆ.23– ನ್ಯೂ ಮೆಕ್ಸಿಕೋದಲ್ಲಿನ ಅಮೆರಿಕ ವಾಯುನೆಲೆಯಲ್ಲಿ ಗುಂಡಿನ ದಾಳಿಗೆ ಓರ್ವ ಯೋಧ ಬಲಿಯಾಗಿದ್ದು ಮತ್ತೋರ್ವ ಗಾಯಗೊಂಡ ಘಟನೆ ಜರುಗಿದೆ. ಅಲ್ಬುಕರ್ಕ್‌ನಲ್ಲಿರುವ ಕರ್ಟ್‌ಲ್ಯಾಂಡ್ ವಾಯುನೆಲೆಯ ಪ್ರವೇಶದ್ವಾರವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು.
ಈ ಗುಂಡಿನ ಚಕಮಕಿಯಲ್ಲಿ ವಾಯುಪಡೆಯ ಯೋಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವರಿಗೆ ಕೈಗೆ ಗುಂಡೇಟು ತಗುಲಿ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಇದೊಂದು ಭಯೋತ್ಪಾದಕ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಶಂಕಿತರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗುಂಡಿನ ದಾಳಿ ಉಗ್ರರಿಂದ ನಡೆಯಿತೇ ಅಥವಾವಾಯುಪಡೆ ಯೋಧರೇ ಪರಸ್ಪರಗುಂಡುಹಾರಿಸಿಕೊಂಡಿರುವರೇ ಎಂಬುದು ಖಚಿತವಾಗಿಲ್ಲ ಎಂದು ಎಫ್‌ಬಿಐ ನೀಡಿರುವ ಹೇಳಿಕೆ ತಿಳಿಸಿದೆ. ಗುಂಡಿನ ದಾಳಿಯಲ್ಲಿ ಮಡಿದ ಮತ್ತು ಗಾಯಗೊಂಡ ವ್ಯಕ್ತಿಗಳ ವಿವರಗಳು ಸದ್ಯದ ಮಟ್ಟಿಗೆ ತಿಳಿದುಬಂದಿಲ್ಲ.