Monday, February 24, 2025
Homeರಾಷ್ಟ್ರೀಯ | Nationalಟೆಂಪೋ-ಟ್ರಕ್ ಡಿಕ್ಕಿ, ಏಳು ಮಂದಿ ಸಾವು

ಟೆಂಪೋ-ಟ್ರಕ್ ಡಿಕ್ಕಿ, ಏಳು ಮಂದಿ ಸಾವು

7 dead, several injured in truck-tempo collision on Noora Bridge in Patna

ಪಾಟ್ನಾ, ಫೆ.24 – ಚಲಿಸುತ್ತಿದ್ದ ಟ್ರಕ್ ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿರುವ ಘಟನೆ ಕಳೆದ ರಾತ್ರಿ ಮಸೌಹಿ‌ರ್ ಪ್ರದೇಶದ ನೂರಾ ಸೇತುವೆ ಬಳಿ ನಡೆದಿದೆ.

ಮಸೌರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುತಂತ ಸಂಭವಿಸಿದ್ದು, ಎರಡೂ ವಾಹನಗಳು ಜಖಂಗೊಂಡಿದ್ದು ಕ್ಯಾಬಿನ್‌ನಲ್ಲಿ ಕುಳಿತ್ತಿದ್ದ ಚಾಲಕ ಸಹಿತ 7ಮಂದಿಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ಸ್‌ಪೆಕ್ಟ‌ರ್ ವಿಜಯ್ ಕುಮಾರ್ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News