Monday, February 24, 2025
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಮನೆ ಮುಂದೆ ಇದ್ದ ತೆಂಗಿನ ಮರ ಬಿದ್ದು 3 ವರ್ಷದ ಮಗು ಸಾವು

ಮನೆ ಮುಂದೆ ಇದ್ದ ತೆಂಗಿನ ಮರ ಬಿದ್ದು 3 ವರ್ಷದ ಮಗು ಸಾವು

Three-year-old child dies after coconut tree falls

ಗೌರಿಬಿದನೂರು,ಫೆ.24– ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ತೆಂಗಿನ ಮರ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾಲಗಾನಹಳ್ಳಿಯಲ್ಲಿ ನಡೆದಿದೆ.
ಪೃಥ್ವಿರಾಜ್ (3) ಮೃತ ಮಗುವಾಗಿದ್ದು, ಗರ್ಭಿಣಿ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿವೆ.

ಕಳೆದ 15 ದಿನಗಳ ಹಿಂದೆ ಹೆರಿಗೆಗಾಗಿ ಮೋನಿಕಾ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಮನೆಯ ಮುಂದೆ ಇದ್ದ ತೆಂಗಿನ ಮರ ಏಕಾ ಏಕಿ ಮುರಿದು ಬಿದ್ದಿದೆ ಮನೆಯವರು ಆತಂಕಗೊಂಡಿದ್ದಾರೆ.

ಮಗು ಅಲ್ಲೇ ಆಟವಾಡುವಾಗ ಗರಿಗಳು ತಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ತಾಯಿ ಮೋನಿಕಾ ಕಾಲು ಮುರಿದಿದ್ದು ಅವರನ್ನು ಬೆಂಗಳೂರಿನ ಆಸ್ಪತ್ರೆ ಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News