Monday, February 24, 2025
Homeರಾಜ್ಯರಾಜ್ಯದಲ್ಲಿ ಹಳೆಯ ಮತ್ತೆ ಹೊಸ ಪಿಂಚಣಿ ವ್ಯವಸ್ಥೆ ಕುರಿತು ಗರಿಗೆದರಿದ ಚರ್ಚೆ, ಎರಡಕ್ಕೂ ವ್ಯತ್ಯಾಸವೇನು..?

ರಾಜ್ಯದಲ್ಲಿ ಹಳೆಯ ಮತ್ತೆ ಹೊಸ ಪಿಂಚಣಿ ವ್ಯವಸ್ಥೆ ಕುರಿತು ಗರಿಗೆದರಿದ ಚರ್ಚೆ, ಎರಡಕ್ಕೂ ವ್ಯತ್ಯಾಸವೇನು..?

what is the difference between old and new pension system

ಬೆಂಗಳೂರು,ಫೆ.24- ಹಳೆಯ ಪಿಂಚಣಿ ವ್ಯವಸ್ಥೆ ಮತ್ತು ಹೊಸ ಪಿಂಚಣಿ ವ್ಯವಸ್ಥೆಯ ಚರ್ಚೆ ಮತ್ತೆ ರಾಜ್ಯದಲ್ಲಿ ಆರಂಭವಾಗಿದೆ. ಹಳೆಯ ಪಿಂಚಣಿಯೇ ಬೇಕು ಎನ್ನುವ ನೌಕರರ ಕನಸಿನ ಬೀಜ ಮತ್ತೆ ಅರಳಲಾರಂಭಿಸಿದೆ. ಇದಕ್ಕೆ ಕಾರಣ, ಕರ್ನಾಟಕ ಸರ್ಕಾರೀ ನೌಕರರ ಸಂಘದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್ ಆಡಿರುವ ಮಾತುಗಳು.

ಹಳೆಯ ಪಿಂಚಣಿ ವ್ಯವಸ್ಥೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಾಗುವುದು ಎನ್ನುವುದು ಆ ಪಾರ್ಟಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು. ಹೇಳಿದ್ದನ್ನು ಮಾಡಿ ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದು ಕೂತಿದ್ದಾರೆ. ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ.

ಹೊಸ ಪಿಂಚಣಿ ವ್ಯವಸ್ಥೆ ಬೇಡ, ಹಳೆಯ ಪಿಂಚಣಿ ವ್ಯವಸ್ಥೆಯೇ ಬೇಕು ಎಂದು ನೌಕರರು ಹಠ ಹಿಡಿದು ಕೂತಿರುವುದಕ್ಕೆ ಹಲವು ಕಾರಣಗಳಿವೆ. ಯಾಕೆಂದರೆ, ಹೊಸ ಪಿಂಚಣಿ ಯೋಜನೆಯಲ್ಲಿ ಹಲವು ಲೋಪದೋಷಗಳನ್ನು ನೌಕರರು ಎತ್ತಿ ತೋರಿಸುತ್ತಿರುವುದು. 2004ರ ಮೊದಲು ಕೆಲಸಕ್ಕೆ ಸೇರಿಕೊಂಡ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಇರಲಿದೆ. ಇದು, ಕೇಂದ್ರ ಮತ್ತು ರಾಜ್ಯ ಸರ್ಕಾರೀ ನೌಕರರಿಗೆ ಅನ್ವಯವಾಗುತ್ತದೆ. ಹಳೆಯ ಪಿಂಚಣಿಯ ಒಂದು ಒಳ್ಳೆಯ ಬೆನಿಫಿಟ್ ಎಂದರೆ, ಇಂತಿಷ್ಟೇ ಪಿಂಚಣಿ ಬರಬಹುದು ಎಂದು ಮೊದಲೇ ಲೆಕ್ಕಾಚಾರವನ್ನು ಹಾಕಬಹುದು.

ಹಳೆಯ ಮತ್ತು ಹೊಸ ಪಿಂಚಣಿ ವ್ಯವಸ್ಥೆಯ ವ್ಯತ್ಯಾಸವೇನು?:
ಹಳೆಯ ಪಿಂಚಣಿ (ಒಪಿಎಸ್) 2004 ರ ಮೊದಲು ಸೇರಿಕೊಂಡ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅನುಷ್ಠಾನಗೊಳಿಸಲಾಗಿರುವ ಪಿಂಚಣಿ ಸ್ತ್ರೀಂ. ತಮ್ಮ ಸೇವಾ ಅವಧಿಯ ಕೊನೆಯ ಬೇಸಿಕ್ ಸಂಬಳವನ್ನು ಆಧರಿಸಿ, ಮಾಸಿಕ ಪಿಂಚಣಿ ಮೊತ್ತ ನಿಗದಿಯಾಗುತ್ತದೆ.

*ಪಿಂಚಣಿದಾರರು ಮೃತ ಪಟ್ಟರೆ ಅವರು ನಾಮನಿರ್ದೇಶನ ಮಾಡಿದವರಿಗೆ (ನಾಮಿನೀ) ಈ ಸೌಲಭ್ಯ ಮುಂದುವರಿಯುತ್ತದೆ.
*ವೇತನ ಆಯೋಗದ ಶಿಫಾರಸಿನಂತೆ, ಪ್ರತೀ ವರ್ಷ ಪಿಂಚಣಿ ಮೊತ್ತದಲ್ಲಿ ಸಣ್ಣ ಮಟ್ಟದಲ್ಲಿ ಬದಲಾವಣೆಯಾಗುತ್ತದೆ.
ಹೊಸ ಪಿಂಚಣಿ ಸ್ಕೀಮ್ (ಎನ್‌ಪಿಎಸ್) :
*ಹೊಸ ಪಿಂಚಣಿಯಡಿಯಲಿ, ಉದ್ಯೋಗಿಯ ಸಂಬಳದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ.
*ಕಡಿತಗೊಳಿಸಲಾದ ಮೊತ್ತ ಏನಿದೆಯೋ, ಅಷ್ಟೇ ಮೊತ್ತವನ್ನು ಸರ್ಕಾರವೂ ಭರಿಸುತ್ತದೆ. ನೌಕರರ ಮತ್ತು ಸರ್ಕಾರದ ಪಾಲನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ.
*ನಿವೃತ್ತಿಯ ನಂತರ ಉದ್ಯೋಗಿಯು ತನ್ನ ಖಾತೆಯಲ್ಲಿ ಸಂಗ್ರಹವಾದ ಈ ಮೊತ್ತದ ಶೇ. 60 ವಿದ್ ಡ್ರಾ ಮಾಡಿಕೊಳ್ಳಬಹುದು. ಉಳಿದ ಶೇ. 40 ರಷ್ಟನ್ನು ಪಿಂಚಣಿಯಾಗಿ ಪಡೆಯಲು ಬಳಸಿಕೊಳ್ಳಬಹುದು.

ವ್ಯತ್ಯಾಸ :
*ಬಿಪಿಎಸ್ ಪಿಂಚಣಿ ಹಣವನ್ನು ಸರ್ಕಾರವೇ ಭರಿಸುತ್ತದೆ, ಆದರೆ ಎನ್‌ಪಿಎಸ್‌ನಲ್ಲಿ ಉದ್ಯೋಗಿ ಮತ್ತು ಸರ್ಕಾರ ಇಬ್ಬರೂ ಕೊಡುಗೆ ನೀಡಬೇಕಾಗುತ್ತದೆ.
*ಎಲ್‌ ಪಿಎಸ್‌ನಲ್ಲಿ ಪಿಂಚಣಿ ಮೊತ್ತದ ಖಾತರಿ ಇರುತ್ತದೆ, ಆದರೆ ಕೆಪಿಎಸ್‌ನಲ್ಲಿ ಪಿಂಚಣಿಯ ಮೊತ್ತವು ಮಾರುಕಟ್ಟೆಯಲ್ಲಿ ಹೂಡಲಾದ ಕಂಪೆನಿಯ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ.
*ಎಲ್‌ ಪಿಎಸ್ ಸ್ಟೀಂ ನಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. ಆದರೆ, ಓಕಖ ಸರ್ಕಾರದ ಮೇಲೆ ಕಡಿಮೆ ಹೊರೆಯನ್ನು ಉಂಟುಮಾಡುತ್ತದೆ.
*ಎಲ್‌ಪಿಎಸ್‌ನಲ್ಲಿ ಪಿಂಚಣಿದಾರರ ಮರಣದ ನಂತರವೂ ಹಣ ನಾಮಿನೀಗೆ ಸಿಗುತ್ತದೆ, ಹೊಸ ಪದ್ದತಿಯಲ್ಲಿ ಅದಿಲ್ಲ,
*ಹೊಸ ಪದ್ಧತಿಯಲ್ಲಿ ಸಂಗ್ರಹವಾಗುವ ಮೊತ್ತದ ಶೇ.60ರಷ್ಟು ಏಕಕಾಲಕ್ಕೆ ವಿದ್ ಡ್ರಾ ಮಾಡುವ ಅವಕಾಶವಿದೆ. ಹಳೆಯ ಪದ್ಧತಿಯಲ್ಲಿ ಅದಿಲ್ಲ.

RELATED ARTICLES

Latest News