ಬೆಂಗಳೂರು, ಫೆ;24 : ಲವ್ ಜಿಹಾದ್ ಎಂಬ ವಿಕೃತ ಕೃತ್ಯದಿಂದ ಹಿಂದೂ ಮಹಿಳೆಯರನ್ನ ಮೋಸ ಮಾಡಿ, ಮತಾಂತರಗೊಳಿಸಿ ಹಿಂಸಿಸುತ್ತಿರುವ ಮುಸ್ಲಿಂ ಯುವಕರ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಅವರನ್ನು ರಕ್ಷಿಸಲು ಕರ್ನಾಟಕದಲ್ಲಿ ನೂರು ಸ್ಥಳಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ತ್ರಿಶೂಲ ದೀಕ್ಷೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲವ್ ಜಿಹಾದ್ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಇವರು , ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಲವ್ ಜಿಹಾದ್ ಹೆಚ್ಚುತ್ತಿದೆ. ಇದರ ವಿರುದ್ಧವಾಗಿ ಶ್ರೀರಾಮ ಸೇನೆ ಹೋರಾಟ ಮಾಡುತ್ತಾ ಬಂದಿದೆ. ಇದರ ವಿರುದ್ಧ ಅರಿವನ್ನು ಮೂಡಿಸುತ್ತಾ ಬಂದಿದೆ .ಮೊದಲ ಭಾಗವಾಗಿ ಲವ್ ಜಿಹಾದ್ ಎಂಬ ಪುಸ್ತಕವನ್ನು 2009ರಲ್ಲಿ ನಾವು ಹೊರತಂದಿದ್ದು, ಅದರ ಮೂಲಕ ಹಿಂದೂ ಹುಡುಗಿಯರಿಗೆ ಜಾಗೃತಿ ಮೂಡಿಸುವ ಮತ್ತು ಅವರಿಗೆ ರಕ್ಷಣೆ ಕೊಡುವ ಕಾರ್ಯವನ್ನು ಮಾಡಲಾಗಿದೆ.
ಇಸ್ಲಾಂ ಧರ್ಮವನ್ನು ವಿಸ್ತಾರ ಮಾಡಲು ನಮ್ಮ ಹಿಂದೂ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ, ಮತಾಂತರಗೊಳಿಸಿ, ಅವರ ಮಾತು ಕೇಳದಿದ್ದಾಗ ಕೊಲೆ ಮಾಡಿ ಹೀನಾಯ ಕೃತ್ಯವನ್ನು ಮುಸ್ಲಿಂ ಯುವಕರು ಮೆರೆಯುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯಾಗಲಿ, ಸರ್ಕಾರಗಳಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಹುಬ್ಬಳ್ಳಿಯ ಕಾಲೇಜು ಒಂದರಲ್ಲಿ ನೇಹಾ ಹಿರೇಮಠ ಎಂಬ ಹುಡುಗಿಯನ್ನು ಆಡು ಹಗಲೇ ಕೊಲೆ ಮಾಡಲಾಯಿತು ಸಿದ್ದರಾಮಯ್ಯ ಸರ್ಕಾರ ಅವರನ್ನು ಕೂಡಲೇ ಬಂಧಿಸುತ್ತೇವೆ ಎಂದು ಹೇಳಿದರು ಅದು ಇಲ್ಲಿವರೆಗೂ ಸಾಧ್ಯವಾಗಲಿಲ್ಲ. ಇದು ನಮ್ಮ ಹೆಣ್ಣುಮಕ್ಕಳ ರಕ್ಷಣೆಯ ಕುರಿತಾಗಿ ಸಿದ್ದರಾಮಯ್ಯನಲ್ಲಿರುವ ಮನೋಭಾವವನ್ನು ತಿಳಿಸುತ್ತದೆ. ಈ ವಿಷಯದಲ್ಲಿ ಅವರು ನಾಟಕವಾಡುತ್ತಿದ್ದಾರೆ ಎಂದರು
ನ್ಯಾಯಾಲಯಗಳಲ್ಲೂ ಲವ್ ಜಿಹಾದ್ ಪ್ರಹಾಕರಣಗಳು ಬೇಗನೆ ಇತ್ಯರ್ಥ್ಯವಾಗುತ್ತಿಲ್ಲ, ಇದಕ್ಕೆ ನಿದರ್ಶನ ನಿರ್ಭಯ ಪ್ರಕರಣ. 15 ವರ್ಷವಾದ ಮೇಲೆ ಆರೋಪಿಗಳಿಗೆ ಶಿಕ್ಷೆಯಾಯಿತು. ಕರ್ನಾಟಕ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿರುವಂತೆ ಮಹಿಳೆಯರ ಸುರಕ್ಷಿತೆವಾಗಿ ವಿಶೇಷ ಕಾನೂನು ಜಾರಿ ಮಾಡಿ ಇಸ್ಲಾಮಿಕರಣದಿಂದ ನಮ್ಮ ಮಹಿಳೆಯರ ರಕ್ಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು
ಲವ್ ಜಿಹಾದ್ ಈ ಎರಡನೇ ಆವೃತ್ತಿಯ ಪುಸ್ತಕವನ್ನು, ಈಗಾಗಲೇ ಒಂದು ಲಕ್ಷ ಪ್ರತಿಗಳ ಮುದ್ರಣ ಮಾಡಲಾಗಿದೆ. ಇದನ್ನು ಪ್ರತಿ ಕಾಲೇಜುಗೂ ಮತ್ತು ಮನೆಮನೆಗೂ ತಲುಪಿಸಲಾಗುವುದು. ಪುಸ್ತಕದಲ್ಲಿ ಹೆಲ್ಪ್ ಲೈನ್ ನಂಬರನ್ನು ಕೂಡ ಕೊಡಲಾಗಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಲವ್ ಜಿಹಾದಿಗೆ ಸಿಲುಕಿರುವ ಹೆಣ್ಣು ಮಕ್ಕಳ ಸಂಬಂಧಿಕರು, ಹೆಣ್ಣು ಮಕ್ಕಳು ಕರೆ ಮಾಡಿ ಸಹಾಯ ಕೇಳುತ್ತಿದ್ದಾರೆ ಎಂದು ಪುಸ್ತಕದ ಮಹತ್ವವನ್ನು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಬೆಂಗಳೂರು ಅಧ್ಯಕ್ಷ ಎಸ್ ಭಾಸ್ಕರನ್, ಸುಂದರೇಶ್, ದುರ್ಗಾ ಸೇನೆ ಅಧ್ಯಕ್ಷ ಭವ್ಯ ಸಂದೇಶ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಮುಂತಾದವರು ಉಪಸ್ಥಿತರಿದ್ದರು