Tuesday, February 25, 2025
Homeರಾಜ್ಯBIG NEWS : ಜನರಿಗೆ ಮತ್ತೊಂದು ಬೆಲೆ ಏರಿಕೆ ಬರೆ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ...

BIG NEWS : ಜನರಿಗೆ ಮತ್ತೊಂದು ಬೆಲೆ ಏರಿಕೆ ಬರೆ, ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಹೆಚ್ಚಳ..!

Cooking oil prices increase, hit home budgets

ಬೆಂಗಳೂರು,ಫೆ.24– ಕಳೆದ ಕೆಲ ದಿನಗಳಿಂದ ರೂಪಾಯಿ ಲೆಕ್ಕದಲ್ಲಿ ಏರುತ್ತದ್ದ ಖಾದ್ಯ ತೈಲ ಈ ಬಾರಿ ಬರೋಬ್ಬರಿ ಒಂದೇ ಭಾರಿ 10 ರೂ. ಗೆ ಏರಿಕೆಯಾಗಿದ್ದು ಗ್ರಾಹಕರಿಗೆ
ಮತ್ತೊಂದು ಶಾಕ್ ನೀಡಿದೆ.

ಬಸ್, ಮೆಟ್ರೋ ಪ್ರಯಾಣದರ ಹೆಚ್ಚಳದ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆ 10 ರೂ. ಕೊಬ್ಬರಿ ಎಣ್ಣೆ ಏಕಾ ಏಕಿ 50 ರೂ. ಹೆಚ್ಚಳವಾಗಿದ್ದು ಗೃಣಿಯರ ಕೈ ಕಟ್ಟಿದಂತಾಗಿದೆ. ಕಳೆದು
ಒಂದು ತಿಂಗಳ ಬೆಲೆಗೂ ಪ್ರಸ್ತುತ ಬೆಲೆಗೂ 10 ರೂ. ಏರಿಕೆಯಾಗಿದೆ.

ಸನ್‌ಫ್ಲವ‌ರ್, ಫಾಮ್‌ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ, ಸಾಸಿವೆ ಎಣ್ಣೆ, ಬೆಲೆಯಲ್ಲಿ 10 ರೂ. ಏರಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸನ್‌ಫ್ಲವರ್ ಎಣ್ಣೆ ಬೆಲೆ ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು ಎಳನೀರಿಗೆ ಬೇಡಿಕೆ ಜಾಸ್ತಿಯಾದ ಹಿನ್ನಲೆಯಲ್ಲಿ ಕೊಬ್ಬರಿ ಅಭಾವ ಸೃಷ್ಟಿಯಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಒಂದೇ ಬಾರಿ 50 ರೂ ಬೆಲೆ ಹೆಚ್ಚಾಗಿದ್ದು ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಕೊಬ್ಬರಿ ಎಣ್ಣೆ 320 ರೂ. ಇದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೆ ಇದ್ದು ಜನ ಸಾಮಾನ್ಯರ ಜೀವನ ನಿರ್ವಹಣೆ ಕಷ್ಟವಾಗಿದೆ.

ಅಡುಗೆ ಎಣ್ಣೆ 10 ರಿಂ 20 ರೂ ಹೆಚ್ಚಳ ( ಕೆ.ಜಿ):
ಸನ್ ಫ್ಲವರ್ : ಹಳೇ ದರ – 133, ಹೊಸ ದರ- 143,
ಗೋಲ್ಡ್ ಎನ್ನರ್: ಹಳೇ ದರ – 135, ಹೊಸ ದರ 145
ರುಚಿ ಗೋಲ್ಡ್ ಹಳೇ ದರ – 98, ಹೊಸ ದರ – 133
ಜೆಮಿನಿ: ಹಳೇ ದರ – 140, ಹೊಸ ದರ – 155
ಇಮಾಮಿ: ಹಳೇ ದರ 135, ಹೊಸ – 145
ಫ್ರೀಡಂ: ಹಳೇ ದರ – 130, ಹೊಸ ದರ – 144
ದಾರಾ : ಹಳೇ ದರ 140, ಹೊಸ – 150
ತೆಂಗಿನ ಎಣ್ಣೆಗೆ 50 ರೂ ಹೆಚ್ಚಳ (1ಕೆಜಿ ಲೆಕ್ಕ):
ಪ್ಯಾರಾಚುಟ್: ಹಳೇ ದರ – 380, ಹೊಸ ದರ -425
ಕೆಪಿಎಲ್: ಹಳೇ ದರ – 310, ಹೊಸ ದರ – 326
ವಿವಿಪಿ: ಹಳೇ ದರ – 220, ಹೊಸ ದರ 250

RELATED ARTICLES

Latest News