Tuesday, February 25, 2025
Homeರಾಜ್ಯಪೊಲೀಸ್ ಠಾಣೆಗೆ ಕಲ್ಲು ತಂದು ಹೊಡೆದವರನ್ನು ರಕ್ಷಿಸಬೇಕೇ..? : HDK

ಪೊಲೀಸ್ ಠಾಣೆಗೆ ಕಲ್ಲು ತಂದು ಹೊಡೆದವರನ್ನು ರಕ್ಷಿಸಬೇಕೇ..? : HDK

Should we protect those who hit the police station with stones..?

ಮೈಸೂರು,ಫೆ.24- ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮೂಟೆಗಟ್ಟಲೆ ಕಲ್ಲು ತೆಗೆದುಕೊಂಡು ಬಂದು ಹೊಡೆದವರನ್ನ ರಕ್ಷಣೆ ಮಾಡಬೇಕಾ? ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಸಂದೇಶ ಜಾರಿಗೆ ಬರಬೇಕು. ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಆಗಿ ಉಳಿಯಬೇಕು ಎಂದರು. ಸಮಾಜಕ್ಕೆ ರಕ್ಷಣೆ ನೀಡಬೇಕೆಂದು ಹೋಗುತ್ತೀರಿ. ಮತ್ತೊಂದೆಡೆ ಅವರು ಭದ್ರವಾಗುತ್ತಾ ಹೋಗುತ್ತಾರೆ. ಎರಡೂ ಪಕ್ಷದ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿಗೆ ಇಂತಹವರನ್ನ ಬಲಿ ಹಾಕಲೇಬೇಕು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನ ಬಲಿ ಹಾಕಬೇಕು. ಎಷ್ಟು ದಿನ ಅಂತ ಇದನ್ನ ಸಹಿಸಿಕೊಳ್ಳುತ್ತೀರಿ.

ಯಾರನ್ನೋ ಓಲೈಸಲು ಸರ್ಕಾರ ಇಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಸುವವನು ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ ಎಂದರು.

ಗೃಹಸಚಿವರಿಗೆ ಪೊಲಿಟಿಕಲ್ ವೈರಾಗ್ಯ:
ಗೃಹ ಸಚಿವರು ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೃಹಸಚಿವರಿಗೆ ಪೊಲಿಟಿಕಲ್ ವೈರಾಗ್ಯ ಬಂದ ಆಗಿದೆ ಎಂದು ವ್ಯಂಗ್ಯವಾಡಿದರು. ಮಹದೇವಪ್ಪ ಹೇಳುತ್ತಾರೆ. ಸಿಎಂ ರೆಕಾರ್ಡ್ ಮಾಡಬೇಕು ಅಂತಾರೆ. ಮಹದೇವಪ್ಪ ಅವರೇ, ಎಷ್ಟು ವರ್ಷ ಆಡಳಿತ ನಡೆಸಿದ್ದೀರಿ ಅನ್ನೋದಲ್ಲ. ಈ ನಾಡಿನ ಜನರ ಎಷ್ಟು ಸಮಸ್ಯೆ ಬಗೆಹರಿಸಿದ್ದೀರಿ ಅನ್ನೋದು ಮುಖ್ಯ ಎಂದರು.

ರೈತರು, ಮಹಿಳೆಯರು, ಯುವಕರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡುವುದು ಈ ಬಾರಿಯ ಬಜೆಟ್ ಆಶಯವಾಗಿದೆ. ಈ ಬಾರಿ 50 ಲಕ್ಷ ಕೋಟಿ ರೂ ಆಯವ್ಯಯ ಮಂಡನೆ ಮಾಡಲಾಗಿದೆ. 11.20 ಲಕ್ಷ ಕೋಟಿ ರೂ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಗೆ ತೀರ್ಮಾನ ಮಾಡಲಾಗಿದೆ.

ರೈತರ ಕೃಷಿವಲಯಕ್ಕೆ 1.72 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಹಿಂದುಳಿದ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಟಾರ್ಟಪ್‌ಗಳ ಮೂಲಕ ಆ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಮೀನುಗಾರಿಕೆ, ಹೈನುಗಾರಿಕೆ, ಚರ್ಮೋದ್ಯಮಕ್ಕೆ ಒತ್ತು ನೀಡಲಾಗಿದ್ದು, ಯುವಕರಿಗೆ ಲೆದರ್ ಇಂಡಸ್ಟ್ರಿ ಮೂಲಕ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಸಚಿವರು ಹೇಳಿದರು.

RELATED ARTICLES

Latest News