ದುಬೈ,ಫೆ.24- ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಣೆಗೆ ಹಾಜರಾಗಿರುವ ವಿದೇಶಿಗರನ್ನು ಐಸಿಸ್ ಉಗ್ರರು ಅಪಹರಿಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಗುಪ್ತಚರ ವಿಭಾಗ ಎಚ್ಚರಿಕೆ ಕೊಟ್ಟಿದೆ. ಪಾಕಿಸ್ತಾನದ ಇಸ್ಲಾಮಿಕ್ ಸ್ಟೇಟ್ ಬೊರಸನ್ ಪ್ರಾಂತ್ಯದಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯದ ವೀಕ್ಷಣೆಗೆ ಆಗಮಿಸಿರುವ ವಿದೇಶಿಗರನ್ನು ಹಣದ ಆಸೆಗಾಗಿ ಅಪಹರಣ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ವಿಶೇಷವಾಗಿ ಈ ಉಗ್ರರು ಚೀನಾ ಮತ್ತು ಅರಬ್ ದೇಶದಿಂದ ಆಗಮಿಸಿರುವ ಪ್ರಜೆಗಳನ್ನು ಗುರಿಯಾಗಿಟ್ಟುಕೊಂಡು ಅಪಹರಣ ಮಾಡುವ ಶಂಕೆಯಿದೆ. ಹೀಗಾಗಿ ವಿಮಾನ ನಿಲ್ದಾಣಗಳು, ರಾಯಭಾರಿ ಕಚೇರಿಗಳು, ಬಂದರುಗಳು ಸೇರಿದಂತೆ ಹಲವು ಕಡೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಐಸಿಸ್ ಉಗ್ರರಿಗೆ ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಾಗಿದೆ. ಹೀಗಾಗಿ ಗಣ್ಯರನ್ನು ಅಪಹರಿಸಲು ಸಂಚು ರೂಪಿಸುತ್ತಿದ್ದಾರೆ. ಸರ್ಕಾರ ಈ ಕೂಡಲೇ ಹೆಚ್ಚಿನ ಭದ್ರತೆಯನ್ನು ನಿಯೋಜಿಸಬೇಕೆಂದು ಸಲಹೆ ಕೊಟ್ಟಿದೆ. ವಿಶೇಷವಾಗಿ ಪ್ರಮುಖ ನಗರದ ಹೊರವಲಯಗಳಲ್ಲಿ ಉಗ್ರರು ವಿದೇಶಿಗರಿಗೆ ಮನೆಗಳನ್ನು ಬಾಡಿಗೆ ಕೊಡಲು ಸಂಚು ರೂಪಿಸಿದ್ದಾರೆ.
ವಿಶೇಷವಾಗಿ ರಿಕ್ಷಾ ಹಾಗೂ ಮೋಟಾರ್ ಸೈಕಲ್‌ನಿಂದ ಬರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಗಲಿನಲ್ಲಿ ಭದ್ರತಾ ಪಡೆಗಳ ಕಣ್ಣುಪ್ಪಿಸಲು ರಾತ್ರಿ ವೇಳೆ ಆಗಮಿಸುವ ಗಣ್ಯರನ್ನು ಸುರಕ್ಷಿತ ಸ್ಥಳಗಳಿಗೆ ಕೊರೆದೊಯ್ಯುವ ನೆಪವೊಡ್ಡುತ್ತಾರೆ. ಈ ಹಿಂದೆ ಶಾಂಫ್ಟ್ ಮತ್ತು ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ದಾಳಿಯನ್ನು ಉಲ್ಲೇಖ ಮಾಡಲಾಗಿದೆ.