ಕಿನ್ನಾಸಾ, (ಕಾಂಗೋ), ಫೆ.25- ವಾಯುವ್ಯ ಕಾಂಗೋದಲ್ಲಿ ಪತ್ತೆಯಾಗದ ಕಾಯಿಲೆಯೊಂದು ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ 50ಕ್ಕೂ ಅಧಿಕ ಜನರು ಮರಣ ಹೊಂದಿರುವುದು ಆತಂಕ ಸೃಷ್ಟಿಸಿದೆ ಎಂದು ಸ್ಥಳೀಯ ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ತಿಳಿದುಬಂದಿದೆ.
ಬಹುತೇಕ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ತಲೆದೋರಿದ 48 ಗಂಟೆಗಳಲ್ಲೇ ಮರಣ ಸಂಭವಿಸಿದೆ ಎಂದು ನಿರ್ವಹಣಾ ಕೇಂದ್ರವಾದ ಬಿಕೋರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸೆರ್ಗೆ ನಗಾಲೆಬಾತೋ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಕಾಯಿಲೆ ಜನವರಿ 21 ರಿಂದ ಸ್ಫೋಟಗೊಂಡಿದ್ದು ಇದುವರೆಗೆ 419 ಪ್ರಕರಣಗಳು ದಾಖಲಾಗಿವೆ. 53 ಜನರು ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಕಚೇರಿಯ ಪ್ರಕಾರ ಮೊದಲನೆಯ ಬಾರಿಗೆ ಈ ಕಾಯಿಲೆ ಬಾವಲಿಯನ್ನು ತಿಂದ ಮೂವರು ಮಕ್ಕಳಲ್ಲಿ ಕಾಣಿಸಿಕೊಂಡಿತು. ಈ ಮೂರು ಮಕ್ಕಳು ಮಿದುಳು ಜ್ವರದಂತಹ ಲಕ್ಷಣಗಳಿಂದ 48 ಗಂಟೆಗಳೊಳಗೇ ಮರಣಿಸಿದರು.
ವನ್ಯ ಮೃಗಗಳನ್ನು ತಿನ್ನುವ ಪ್ರವೃತ್ತಿ ಹೆಚ್ಚಾಗಿರುವೆಡೆ ಪ್ರಾಣಿಗಳಿಂದ ಮನುಷ್ಯರಿಗೆ ಕಾಯಿಲೆಗಳು ಹರಡುವುದು ಆತಂಕವನ್ನುಂಟುಮಾಡಿದೆ. ಆಫ್ರಿಕಾದಲ್ಲಿ ಇಂಥ ರೋಗಗಳ ಸಾಂಕ್ರಾಮಿಕತೆ ಕಳೆದ ದಶಕದಲ್ಲಿ ಶೇ. 60ಕ್ಕಿಂತ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ 2022ರಲ್ಲಿ ತಿಳಿಸಿತ್ತು.
ಪ್ರಸಕ್ತ ರೋಗದ ಎರಡನೇ ಆಕೆ ಫೆಬ್ರವರಿ 9ರಂದು ಬೊಮಾಟೆ ಪಟ್ಟಣದಲ್ಲಿ ಆರಂಭವಾದಾನಿಂದ 13 ರೋಗಿಗಳ ರಕ್ತದ ಮಾದರಿಗಳನ್ನು ಕಾಂಗೋದ ರಾಜಧಾನಿ ಕಿನ್ನಾಸಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ ಬಯೋಮೆಡಿಕಲ್ ರಿಸರ್ಚ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಡಬ್ಲ್ಯೂ ಹೆಚ್‌ಓ ತಿಳಿಸಿದೆ.
ಕಳೆದ ವರ್ಷ, ಪೂನಂತಹ ಮತ್ತೆಯ ನಿಗೂಢ ಕಾಯಿಲೆ ಕಾಂಗೋದ ಮತ್ತೊಂದು ಭಾಗದಲ್ಲಿ ಕಾಣಿಸಿಕೊಂಡು ಹತ್ತಾರು ಜನರು ಬಲಿಯಾಗಿದ್ದರು. ಈ ಸಾವುಗಳಿಗೆ ಮಲೇರಿಯಾ ಕಾರಣ ಎಂದು ನಿರ್ಧರಿಸಲಾಗಿತ್ತು.
ಈ ಸಾರಿ ಕಳುಹಿಸಲಾಗಿರುವ ಎಲ್ಲಾ ಮಾದರಿಗಳಲ್ಲಿ ಎಬೋಲಾ ಅಥವಾ ಮಾರ್ಬಗ್‌್ರ ನಂತಹ ಸಾಮಾನ್ಯ ಮಿದುಳು ಜ್ವರದಂಥ ಕಾಯಿಲೆಗಳ ಲಕ್ಷಣಗಳಿಲ್ಲ. ಆದರೆ ಕೆಲವು ಮಾದರಿಗಳಲ್ಲಿ ಮಲೇರಿಯಾದಂಥ ಲಕ್ಷಣಗಳಿವೆ ಎಂದು ಹೇಳಲಾಗಿದೆ.