ಬೆಳಗಾವಿ,ಫೆ.25-ನನ್ನ ಸರ್ವಿಸ್‌ನಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ, ತಪ್ಪಾಗಿ ದೂರು ನೀಡಿ ಈಗ ವಾಪಸ್ ಪಡೆದಿರುವುದರಿಂದ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾರಿಗೆ ಬಸ್ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಹೇಳಿದ್ದಾರೆ.
ದೂರು ನೀಡಿರುವ ಕುಟುಂಬ ದವರು ನನಗೆ ಪರಿಚಿತರು ಆದರೆ ಕೆಲವರ ಮಾತು ಕೇಳಿ ವಿನಾ ಕಾರಣ ದೂರು ನೀಡಿ ಪ್ರಕರಣ ದಾಖಲಾಗಿತ್ತು ಇದರಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈಗ ದೂರು ವಾಪಸ್ ಪಡೆದಿರುವುದರಿಂದ ನನ್ನ ಮೇಲೆ ದಾಖಲಾಗಿರುವ ಪ್ರಕರಣ ರದ್ದಾಗಲಿದೆ ಎಂದು ಹೇಳಿದ್ದಾರೆ ಇದು ನನಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.