ಚಿಕಾಗೋ, ಪಿ.26- ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕ ವಿಮಾನದ ಪೈಲಟ್ ಸಮಯ ಪ್ರಜ್ಞೆಗೆ ಎಲ್ಲರೂ ಸೆಲ್ಯೂಟ್ ಹೇಳುತ್ತಿದ್ದಾರೆ.
ಚಿಕಾಗೋದ ಮಿಟ್ಟೇ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸೌಕ್ವೆಸ್ಟ್ ಏರ್ಲೈನ್ಸ್ ವಿಮಾನದ ಎದುರು ಮತ್ತೊಂದು ವಿಮಾನ ಏಕಾಏಕಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತ್ತು. ಕೂಡಲೇ ಸಂಭಾವ್ಯ ಅಪಾಯ ಮನಗಂಡ ಪೈಲಟ್ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿದ್ದು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿದಂತಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವಂತೆ ಸೌತ್‌ವೆಸ್ಟ್ ವಿಮಾನವು ಇಳಿಯಲು ಪ್ರಯತ್ನಿಸುತ್ತಿರುವಾಗ ಅದೇ ರನ್ ವೇ ಮತ್ತೊಂದು ಭಾಗದಲ್ಲಿ ಮತ್ತೊಂದು ಪುಟ್ಟ ಚಾರ್ಟೆಡ್ ವಿಮಾನ ಅಡ್ಡ ಬಂದಿದೆ. ಕೂಡಲೇ ಪ್ರಯಾಣಿಕ ವಿಮಾನದ ಪೈಲಟ್ ವಿಮಾನವನ್ನು ನೋಡಿ ವಿಮಾನವನ್ನು ಸಂಪೂರ್ಣವಾಗಿ ಕೆಳಗಿಳಿಸದೇ ಮತ್ತೆ ಆಕಾಶಕ್ಕೆ ಹಾರಿಸಿದ್ದಾನೆ. ಆ ಮೂಲಕ ಆಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿದ್ದಾರೆ.
ವಿಮಾನವು ರನ್ನೇ ಮೇಲೆ ಇಳಿಯಲು ಕೇವಲ 50 ಅಡಿ ದೂರದಲ್ಲಿದ್ದಾಗ ಅದನ್ನು ಪೈಲಟ್ ಬಲವಂತವಾಗಿ ಮೇಲಕ್ಕೆ ಟೇಕ್ ಆಫ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ವಿಮಾನವನ್ನು ಮತ್ತೆ ರನ್ ವೇನತ್ತ ತಿರುಗಿಸಿ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ವಿಮಾನ ಕೆಳಗಿಳಿಸಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲರ್ ಹಾಗೂ ಪೈಲಟ್ ನಿರ್ಧಾರದಿಂದ ಅಪಘಾತ ತಪ್ಪಿದೆ. ಇನ್ನೊಂದು ವಿಮಾನವು ರನ್ನೇಗೆ ತಪ್ಪಾಗಿ ಪ್ರವೇಶಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
9 ಬಾರಿ ಎಚ್ಚರಿಕೆ:
ಇನ್ನು ಮಿಲ್ವೇ ಏರ್ ಟ್ರಾಫಿಕ್ ಕಂಟ್ರೋಲ್ ಮಾಹಿತಿಯನ್ನು ಸರಿಪಡಿಸಿ, ಜೆಟ್ನ ಪೈಲಟ್‌ಗೆ ರನ್ ವೇ 31ರಲ್ಲಿ ಇಳಿಯದಂತೆ ಪೈಲಟ್ ಬರೋಬ್ಬರಿ ಕನಿಷ್ಠ ಒಂಬತ್ತು ಬಾರಿ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಆದಾಗ್ಯೂ ಪೈಲಟ್ ಆ ಸೂಚನೆಗಳನ್ನು ನಿರ್ಲಕ್ಷಿಸಿದ್ದಾರೆ.
ಫೈಟರಾಡರ್ 24 ಪ್ರಕಾರ, ನೈಋತ್ಯ ವಿಮಾನವು ನೆಬ್ರಸ್ಕಾದ ಒಮಾಹಾದಿಂದ ಆಗಮಿಸುತ್ತಿತ್ತು. ಮತ್ತು ಖಾಸಗಿ ಜೆಟ್, ಬೊಂಬಾರ್ಡಿಯರ್ ಚಾಲೆಂಜರ್ 350, ಟೆನ್ನೆಸ್ಸಿಯ ನಾಕ್ಸಿಲ್ಲೆಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಮೆರಿಕದಲ್ಲಿ ವಿಮಾನ ದುರಂತಗಳ ಸರಣಿಯೇ ದಾಖಲಾಗಿದ್ದು, ಈ ಪೈಕಿ ಕಳೆದ ತಿಂಗಳು ಸೇನಾ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ಜೆಟ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ 67 ಜನರು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.