ಬೆಂಗಳೂರು, ನ.6- ಪ್ರಧಾನಮಂತ್ರಿಯವರು ಆಧಾರ ರಹಿತವಾಗಿ ತಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದು ಆ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ರಾಜಕೀಯ ಭಾಷಣ ಮಾಡಿ, ಸುಳ್ಳು ಹೇಳಿದ್ದಾರೆ. ಅವರ ಆರೋಪಗಳು ಸುಳ್ಳಿನ ಕಂತೆ ಎಂದರು. ಕರ್ನಾಟಕ ರಾಜ್ಯ ವಿಧಾನಸಭೆ ಫಲಿತಾಂಶ ಪ್ರಧಾನಿಯವರಿಗೆ ನಿರಾಶೆ ಮೂಡಿಸಿದೆ. 48 ಬಾರಿ ಬಂದು ಪ್ರಚಾರ ಮಾಡಿದರು, ಅವರು ಬಂದ ಕಡೆಯಲೆಲ್ಲಾ ಬಿಜೆಪಿ ಸೋಲು ಕಂಡಿದೆ. ಅದರಿಂದ ನಿರಾಶರಾಗಿ ಈವರೆಗೂ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಲ್ಲ.
ಹಿಂದಿನ ಸರ್ಕಾರ ಶೇ.40ರಷ್ಟು ಕಮಿಷನ್ ಆರೋಪ ಇತ್ತಲ್ಲ,ಅದನ್ನು ಹೇಳಬೇಕಲ್ಲ. ನಾವು ತನಿಖೆ ಮಾಡಿಸುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಆರೋಪಗಳ ಬಗ್ಗೆ ದಾಖಲೆಗಳಿದ್ದರೆ ಸಾಬೀತು ಪಡಿಸಲಿ. ಕೇಂದ್ರ ಸರ್ಕಾರದ ನೀತಿಯಾಗಳಿಂದ ದೇಶ ಆರ್ಥಿಕವಾಗಿ ದಿವಾಳಿಯಾಗಿದೆ, ರಾಜ್ಯಕ್ಕೆ ಕೊಡಬೇಕಾಗಿದ್ದನ್ನೇ ಕೊಡಲಾಗುತ್ತಿಲ್ಲ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಈವರೆಗೂ ಬರಕ್ಕೆ ಪರಿಹಾರ ಕೊಡಲಾಗಿಲ್ಲ. ಐದು ಖಾತ್ರಿಗಳನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದಿದ್ದರು.
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
ಈಗ ನಾವು ಜಾರಿ ಮಾಡಿಲ್ಲವೇ. ದೇಶದ ಪ್ರಧಾನಿಯಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಶೋಭೆ ತರುವುದಿಲ್ಲ.ಮಧ್ಯ ಪ್ರದೇಶಕ್ಕೆ ಹೋಗಿ ರಾಜಕೀಯ ಭಾಷಣ ಮಾಡಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ ಸರ್ಕಾರ ಹಣ ನೀಡುತ್ತೇವೆ. ಅದನ್ನು ಬಳಕೆ ಮಾಡಿಕೊಳ್ಳುವುದು ಅವರಿಗೆ ಸೇರಿದ ವಿಷಯ. ನಾವು ಯಾವುದೇ ರೀತಿಯ ಸೂಚನೆ ನೀಡುವುದಿಲ್ಲ ಎಂದರು.
ಉಪಹಾರ ಕೂಟ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲು ಕರೆಯಲಾಗಿತ್ತು. ಜೊತೆಗೆ ಬರಗಾಲದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಬರ ಅಧ್ಯಯನ ನಡೆದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರಧಾನಿ ಜೆಡಿಎಸ್ ನಾಯಕರ ಮಾತುಗಳನ್ನು ಕೇಳುತ್ತಾರೆ, ಪ್ರಭಾವ ಬೀರಿ ರಾಜ್ಯಕ್ಕೆ ಹಣ ಕೊಡಿಸಲಿ. ರಾಜ್ಯದಲ್ಲೂ ಬರ ಸಾಂತ್ವಾನ ಯಾತ್ರೆ ಮಾಡಲಿ ಎಂದರು.
ಪ್ರತಿಮಾ ಕೊಲೆ ಆರೋಪಿ ಒಬ್ಬ ಸಿಕ್ಕಿದ್ದಾರೆ. ಚಾಲಕನಾಗಿದ್ದನ್ನು, ಇತ್ತೀಚೆಗೆ ಆತನ್ನು ತೆಗೆದು ಹಾಕಿದ್ದರು ಎಂದು ವರದಿಯಾಗಿದೆ. ತನೀಖೆ ನಡೆಯುತ್ತಿದೆ. ಒಬ್ಬನೆ ಒಬ್ಬ ಚಾಲಕ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಆತನನ್ನು ಬಂಧಿಸಲಾಗಿದೆಎಂದು ಮಾಹಿತಿ ನೀಡಿದರು.
ಬಿಜೆಪಿ ಜೆಡಿಎಸ್ ಪಕ್ಷಗಳಿಂದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಅನೇಕ ಮಂದಿ ಕಾಂಗ್ರೆಸ್ ಸೇರಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಗುರಿ ನೀಡಲಾಗಿದೆ.
ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮ ಪಕ್ಷದ ಬಗ್ಗೆ ಯಾಕೆ ಮಾತನಾಡುತ್ತಾರೆ. ನಮ್ಮಲ್ಲಿ ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.