ವಿಶ್ವಾದ್ಯಂತ ಲಕ್ಷಾಂತರ ಅನ್ವೇಷಕರು ಫೆಬ್ರವರಿ 26, 2025 ರಂದು ಒಟ್ಟಿಗೆ ಸೇರಿ ಪ್ರಾಚೀನ ಕಾಲದ ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ಆಕಾಶದಲ್ಲಿ ಸಂಭವಿಸುವ ಅಪರೂಪವಾದ ವಿದ್ಯಮಾನಗಳ ಗಮನಾರ್ಹ ಸಂಗಮವಾದಂತಹ ಮಹಾ ಮಹಾಶಿವರಾತ್ರಿ 2025 ಅನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ. ಈ ವರ್ಷದ ಆಚರಣೆಯು ವಿಶಿಷ್ಟವಾಗಿದ್ದು, ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲು ಕಾರಣವೇನೆಂದರೆ ಇದು ಭಾರತ ದೇಶದಲ್ಲಿನ ಪ್ರಯಾಗರಾಜ್‌ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಬೃಹತ್ ತೀರ್ಥಯಾತ್ರೆಯಾದ ಮಹಾ ಕುಂಭಮೇಳದೊಂದಿಗೆ ಹೊಂದಿಕೆಯಾಗುತ್ತಿರುವುದರ ಜೊತೆಗೆ 144 ವರ್ಷಗಳಿಗೊಮ್ಮೆ ಸಂಭವಿಸುವಂತಹ ಸೂರ್ಯ, ಚಂದ್ರ, ಗುರು ಹಾಗೂ ಶನಿ ಗ್ರಹಗಳು ಒಂದೇ ರೇಖೆಯಲ್ಲಿ ಸೇರುತ್ತಿರುವ ಅಸಾಧಾರಣ ಗ್ರಹ ಜೋಡಣೆಯು ಈ ಬಾರಿ ನಡೆಯುತ್ತಿದ್ದು, ಇದು ನಮ್ಮ ಅರಿವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ಒದಗಿಸುತ್ತಿದೆ.
ಈ ಜಾಗತಿಕ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಮುನ್ನಡೆಸುತ್ತಿರುವ ನಂದೀಜಿ ಅವರು ಮಹಾ ಮಹಾಶಿವರಾತ್ರಿ ವಿಶ್ವ ಯೋಗಿ ದಿನವನ್ನು ಆಯೋಜಿಸುತ್ತಿದ್ದು, ನಮ್ಮಲ್ಲಿರುವ ಪ್ರಜ್ಞೆಯನ್ನು ಹೆಚ್ಚಿಸಲು, ನಾಯಕತ್ವದ ಸಾಮರ್ಥ್ಯವನ್ನು ಬೆಳೆಸಲು ಮತ್ತು ಉನ್ನತ ಅರಿವಿನ ಶಕ್ತಿಯನ್ನು ಬಳಸಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಈ ಕಾರ್ಯಕ್ರಮವು ನಮ್ಮನ್ನು ತಲ್ಲೀನಗೊಳಿಸುತ್ತಲೇ ವಾಸ್ತವಿಕ ಆಂತರಿಕ ತೀರ್ಥಯಾತ್ರೆಯನ್ನು ಮಾಡಿಸುತ್ತದೆ.
“144 ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪವಾದ ಬ್ರಹ್ಮಾಂಡದ ಘಟನೆಗಳ ಜೋಡಣೆಯು ಈ ಮಹಾ ಕುಂಭಮೇಳದಿಂದ ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದ್ದು, ಇಲ್ಲಿ 600 ಮಿಲಿಯನ್‌ಗೂ ಅಧಿಕ ಪ್ರಾರ್ಥನೆಗಳು ಗುರು ಗ್ರಹದ 12 ವರ್ಷಗಳ ಕಕ್ಷೆಯೊಂದಿಗೆ ಸೇರುತ್ತವೆ ಮತ್ತು ಇಂತಹ ಪ್ರಜ್ಞೆ ಅಥವಾ ಅರಿವನ್ನು ಗುರು ಎಂದು ಕರೆಯಲಾಗುತ್ತದೆ. ಈ ಮಹಾ ಮಹಾಶಿವರಾತ್ರಿಯ ಅನುಗ್ರಹದ ಪ್ರಮಾಣವನ್ನು ತಮ್ಮ ಆಂತರಿಕ ದೀಪವನ್ನು ಬೆಳಗಿಸುವುದರ ಮೂಲಕ ಯಾರು ಬೇಕಾದರೂ ಸಕ್ರಿಯಗೊಳಿಸಬಹುದು. ಮಹಾ ಕುಂಭಮೇಳದ ದೈವಿಕ ನದಿಗಳಲ್ಲಿ ಆಗುವಂತಹ ಶುದ್ಧೀಕರಣ, ನವೀಕರಣ ಮತ್ತು ಗುಣಪಡಿಸುವಿಕೆಯಂತೆ, ನಾವು ಭಗವಾನ್ ಶಿವನೊಂದಿಗಿರುವ ಒಕ್ಕೂಟಗಳಲ್ಲಿ ವಿಲೀನಗೊಳ್ಳಲು ಸಿದ್ಧರಿದ್ದೇವೆ. ʼಒಳ್ಳೆಯತನವು ಜಯಗಳಿಸುತ್ತದೆʼ ಎಂಬ ಅರ್ಥವನ್ನು ನೀಡುವ ತಮಿಳು ಪದವಿನ್ಯಾಸವಾದ ʼಶೈವಂ ವೆತ್ರಿʼ ಯನ್ನು ನಾವು ನಂಬಿದ್ದೇವೆ” ಎಂದು ವಿಶ್ವ ಯೋಗಿ ದಿನ ಮಹಾಶಿವರಾತ್ರಿ ಮತ್ತು ಜಾಗತಿಕ ಜ್ಞಾನೋದಯವನ್ನು ಬೆಳೆಸುವ ಜಾಗೃತ ಸಾಮಾಜಿಕ ವೇದಿಕೆಯಾದ CNESS ನ ಸಂಸ್ಥಾಪಕರಾದ ನಂದೀಜಿ ಅವರು ಹೇಳಿದರು.
ಭಾರತದ ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿಜಿ ಅವರ ಅಂತರರಾಷ್ಟ್ರೀಯ ಯೋಗ ದಿನವು ಜಾಗತಿಕವಾಗಿ ಪಡೆದ ಮನ್ನಣೆಯಿಂದ ಮತ್ತು 2014 ರಲ್ಲಿ ಇದನ್ನು ವಿಶ್ವಸಂಸ್ಥೆಯು ಅಳವಡಿಸಿಕೊಂಡಿದ್ದರಿಂದ ಪ್ರೇರಿತರಾಗಿರುವ ಮಹಾಶಿವರಾತ್ರಿ ವಿಶ್ವ ಯೋಗಿ ದಿನವು ಈ ಬಾರಿ ಅಂತರರಾಷ್ಟ್ರೀಯ ಯೋಗ ದಿನದ ಉದ್ದೇಶವಾದ – ಯೋಗಿ ಅಂದರೆ ಭಗವಾನ್ ಶಿವನಂತಾಗಲು ಉನ್ನತ ಪ್ರಜ್ಞೆಯ ಸಬಲೀಕರಣ ಮತ್ತು ಸಾಧನೆಯನ್ನು ಆಚರಿಸುತ್ತಿದೆ.
ಈ ಜಾಗತಿಕ ಬಹು-ದಿನದ ವರ್ಚುವಲ್ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಕಾರ್ಯಕ್ರಮದ ದಿನಾಂಕಗಳು: 2025 ರ ಫೆಬ್ರವರಿ 22, 26, ಮತ್ತು 28. ಈ ಐತಿಹಾಸಿಕ ಅನುಭವದ ಭಾಗವಾಗಲು, www.worldyogiday.org ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.