ಬೆಂಗಳೂರು,ಫೆ.27-ಬೆಳಗಾವಿ ಸಾರಿಗೆ ಬಸ್ ನಿರ್ವಾಹಕರು ಕನ್ನಡಿಗರ ಮೇಲೆ ಮರಾಠಿ ಭಾಷಾಂಧ ಪುಂಡರು ನಡೆಸಿದ ಕುಕೃತ್ಯವು ಯಾವುದೇ ನಾಗರೀಕ ಸಮಾಜವು ಸಹಿಸಲು ಸಾಧ್ಯವಿಲ್ಲ. ಇಂತವರನ್ನು ಗುರುತಿಸಿ ರಾಜ್ಯದಿಂದ ಶಾಶ್ವತವಾಗಿ ಗಡಿಪಾರು ಮಾಡಲು ಸಿಎಂ ಸಿದ್ದರಾಮಯ್ಯ ಅಚರ ಕೂಡಲೆ ಆದೇಶ ಹೊರಡಿಸಬೇಕು ಎಂದು ಆಮ್ ಆದ್ದಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಅನೇಕ ವರ್ಷಗಳಿಂದ ತಮ್ಮ ರಾಜಕೀಯ ಅಭಿಲಾಷೆಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಸಾಮರಸ್ಯ ಸಂಬಂಧಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಎಸಗಿ ರಾಜ್ಯದ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಈ ಸಮಾಜದ್ರೋಹಿಗಳನ್ನು ಕೂಡಲೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಎರಡೂ ರಾಜ್ಯಗಳಲ್ಲಿ ಶಾಂತಿಭಂಗ ವಾಗುವ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ತಾವು ಕೂಡಲೇ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಅಲ್ಲದೆ ಭಾಷಾ ಸಾಮರಸ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹಾಳು ಮಾಡುತ್ತಿರುವ ತಮ್ಮ ಪಕ್ಷವು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರುಗಳಿಗೆ ಕಠಿಣ ಎಚ್ಚರಿಕೆ ನೀಡುವ ಮೂಲಕ ಕನ್ನಡಿಗರೊಂದಿಗೆ ಸರಕಾರ ಇದೆ ಎಂಬ ಎಚ್ಚರಿಕೆಯನ್ನು ರವಾನಿಸಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಸಿಎಂಗೆ ಪತ್ರ ಬರೆದು ಚಂದ್ರ ಹೇಳಿದ್ದಾರೆ.