Thursday, February 27, 2025
Homeರಾಷ್ಟ್ರೀಯ | Nationalಹರಿಯಾಣ : ಕುಸ್ತಿಪಟುಗೆ ಗುಂಡಿಟ್ಟು ಹತ್ಯೆ

ಹರಿಯಾಣ : ಕುಸ್ತಿಪಟುಗೆ ಗುಂಡಿಟ್ಟು ಹತ್ಯೆ

Wrestler shot dead at fair in Sonepat village

ಚಂಡೀಗಢ, ಫೆ.27- ಹರಿಯಾಣದ ಸೋನಿಪತ್ ಜಿಲ್ಲೆಯ ಗ್ರಾಮವೊಂದರಲ್ಲಿ ಕುಸ್ತಿಪಟುವನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ರಾಕೇಶ್ (40) ಕೊಲೆಯಾದ ಕುಸ್ತಿಪಟು.

ಕುಂದಲ್ ಗ್ರಾಮದಲ್ಲಿ ಕುಸ್ತಿ ಸ್ಪರ್ಧೆಯನ್ನು ವೀಕ್ಷಿಸಲು ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ಖಾರ್ಖೋಡ ಪೊಲೀಸ್ ಠಾಣೆಯ ಅಧಿಕಾರಿ ಬೀರ್ ಸಿಂಗ್ ತಿಳಿಸಿದ್ದಾರೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ರಾಕೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸೊಹಾಟಿ ಗ್ರಾಮದಲ್ಲಿ ರಾಕೇಶ್‌ ಅಖಾರ ನಡೆಸುತ್ತಿದ್ದರು,ಇದರ ವೈಷಮ್ಯದಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.ಘಟನೆ ಕುತಂತೆ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News