Saturday, March 1, 2025
Homeರಾಷ್ಟ್ರೀಯ | Nationalಕನಸಿನಲ್ಲಿ ಕಾಣಿಸಿಕೊಂಡ ಅದೃಷ್ಟದ ಶಿವಲಿಂಗ ಕದ್ದ ಕಟುಂಬದ ಬಂಧನ

ಕನಸಿನಲ್ಲಿ ಕಾಣಿಸಿಕೊಂಡ ಅದೃಷ್ಟದ ಶಿವಲಿಂಗ ಕದ್ದ ಕಟುಂಬದ ಬಂಧನ

Gujarat family steals Shivling from temple after girl dreams about it; 8 arrested

ಗುಜರಾತ್, ಮಾ. 1- ಬಾಲಕಿಯ ಕನಸಿನಲ್ಲಿ ಶಿವ ಕಾಣಿಸಿಕೊಂಡಿದ್ದ ಎಂಬ ಕಾರಣಕ್ಕೆ ದೇವಾಲಯದಿಂದ ಶಿವನ ವಿಗ್ರಹವನ್ನು ಕದ್ದು ತಮ್ಮ ಮನೆಯಲ್ಲಿ ಶಿವನ ಪ್ರತಿಷ್ಠಾಪನೆ ಮಾಡಿಕೊಂಡಿದ್ದ ಕುಟುಂಬವೊಂದರ ಎಂಟು ಸದಸ್ಯರನ್ನು ಬಂಧಿಸಲಾಗಿದೆ.

ಮಹಾಶಿವರಾತ್ರಿಯ ಸಂದರ್ಭದಲ್ಲಿ ಗುಜರಾತ್‌ನ ದ್ವಾರಕಾದ ದೇವಸ್ಥಾನದಿಂದ ಶಿವಲಿಂಗವನ್ನು ಕದ್ದು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ ಆರೋಪದ ಮೇಲೆ ಕುಟುಂಬದ ಎಂಟು ಸದಸ್ಯರನ್ನು ಬಂಧಿಸಲಾಗಿದೆ. ಬಾಲಕಿಯೊಬ್ಬಳಿಗೆ ಶಿವಲಿಂಗದ ಕನಸು ಬಿದ್ದ ನಂತರ ಕುಟುಂಬದವರು ದ್ವಾರಕಾದಲ್ಲಿರುವ ಪ್ರಾಚೀನ ಭೀದ್ಧಂಜನ್ ಮಹಾದೇವ್ ದೇವಾಲಯದಿಂದ
ಶಿವಲಿಂಗವನ್ನು ಕದ್ದಿದ್ದರು.

ಅಧಿಕಾರಿಗಳು ಆರಂಭದಲ್ಲಿ ಅದನ್ನು ಸಮುದ್ರಕ್ಕೆ ಎಸೆದಿದ್ದಾರೆ ಎಂದು ಶಂಕಿಸಿದ್ದರು. ದ್ವಾರಕಾದಿಂದ 500 ಕಿಲೋಮೀಟರ್ ದೂರದಲ್ಲಿರುವ ಸಬರ್ಕಾಂತ ಜಿಲ್ಲೆಯ ಹಿಮ್ಮತ್‌ನಗರದ ಕುಟುಂಬವೊಂದು ಅದನ್ನು ಕದ್ದಿರುವುದು ಬಳಿಕ ತಿಳಿದುಬಂದಿತ್ತು.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಕುಟುಂಬದ ಒಬ್ಬ ಹುಡುಗಿ ಕನಸಿನಲ್ಲಿ ಕಾಣಿಸಿಕೊಂಡ ಭೀದ್ದಂಜನ್ ಮಹಾದೇವ್ ದೇವಸ್ಥಾನದ ಶಿವಲಿಂಗವನ್ನು
ಮನೆಗೆ ತಂದು ಪ್ರತಿಷ್ಠಾಪಿಸುವುದರಿಂದ ಅವರ ಸಮಸ್ಯೆಗಳು ಕೊನೆಗೊಂಡು ಸಮೃದ್ಧಿ ತರುತ್ತದೆ ಎಂದು ನಂಬಿದ್ದರು ಎಂಬುದು ಪೊಲೀಸರಿಗೆ ಬಳಿಕ ಶಿವಲಿಂಗದಲ್ಲಿ ಕೆತ್ತನೆ ಮಾಡಿರುವ ಕಲ್ಲು ನಾಗರದ ತಲೆ ಮೇಲೆ ಬೆಳೆದ ಕೂದಲು; ಪವಾಡ ಕಣ್ಣುಂಬಿಕೊಳ್ಳಲು ಬಂದ ಜನಮಹೇಂದ್ರ ಮಕ್ಖಾನಾ ಅವರ ಸೊಸೆಯ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡಿತ್ತು, ಕುಟುಂಬದ ಏಳರಿಂದ ಎಂಟು ಸದಸ್ಯರು ದ್ವಾರಕೆಗೆ ಪ್ರಯಾಣ ಬೆಳೆಸಿ ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು.

ಅವರು ದೇವಾಲಯದ ಪೂಜೆಯನ್ನು ನಡೆಸಿದರು ಮತ್ತು ಶಿವಲಿಂಗವನ್ನು ಕದ್ದ ನಂತರ, ಮನೆಗೆ ಹಿಂತಿರುಗಿ ಮಹಾಶಿವರಾತ್ರಿಯಂದು ಅದನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿದ್ದರು.
ನಾವು ಎಂಟು ಆರೋಪಿಗಳನ್ನೂ ಬಂಧಿಸಿದ್ದೇವೆ.

ಮಹೇಂದ್ರನ ಸೊಸೆ ಹರ್ಷದ ಭೀದ್ದಂಜನ್ ಮಹಾದೇವನ ಶಿವಲಿಂಗವನ್ನು ತಮ್ಮ ಮನೆಯಲ್ಲಿ ಸ್ಥಾಪಿಸಿದರೆ, ಅದು ಅದೃಷ್ಟವನ್ನು ತರುತ್ತದೆ ಮತ್ತು ಕುಟುಂಬವು ಪ್ರಗತಿ ಹೊಂದುತ್ತದೆ ಎಂಬುದಾಗಿ ಕನಸು ಕಂಡಿದ್ದರಂತೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಒಂದು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಿದರು ಎಂದು ದ್ವಾರಕಾ ಎಸ್ಪಿ ನಿತೀಶ್ ಪಾಂಡೆ ಹೇಳಿದರು.

RELATED ARTICLES

Latest News